ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಪೊಲೀಸ್‌ ಆ್ಯಕ್ಷನ್‌ 1948’ ಉದ್ಘಾಟನೆ

Published 5 ಫೆಬ್ರುವರಿ 2024, 16:07 IST
Last Updated 5 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಬೀದರ್‌: ನಗರದ ಫತ್ತೆ ದರವಾಜಾ ಸಮೀಪದಲ್ಲಿನ ನವೀಕರಣಗೊಂಡ ಪೊಲೀಸ್‌ ಚೌಕವನ್ನು ಸೋಮವಾರ ಉದ್ಘಾಟಿಸಲಾಯಿತು.

ಚೌಕಕ್ಕೆ ‘ಪೊಲೀಸ್‌ ಆ್ಯಕ್ಷನ್‌ 1948’ ಎಂದು ಮರು ನಾಮಕರಣ ಮಾಡಲಾಗಿದೆ. ವೃತ್ತವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಉದ್ಘಾಟಿಸಿ, ಬಹಳ ಉತ್ತಮ ರೀತಿಯಲ್ಲಿ ವೃತ್ತವನ್ನು ಅಭಿವೃದ್ಧಿ ಪಡಿಸಲಾಗಿದೆ. ಪೊಲೀಸ್‌ ಆ್ಯಕ್ಷನ್‌, ಸರ್ವಧರ್ಮ ಸಮನ್ವಯ, ಸಂಚಾರ ನಿಯಮದ ಕುರಿತು ವೃತ್ತದಲ್ಲಿ ಮಾಹಿತಿ ಇದೆ. ಎಸ್ಪಿಯವರು ವಿಶೇಷ ಮುತುವರ್ಜಿ ವಹಿಸಿ ಆಟೊಮೊಬೈಲ್‌ ಅಸೋಸಿಯೇಷನ್‌ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿ ಪಡಿಸಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಮಾತನಾಡಿ, ಅತಿ ಹೆಚ್ಚು ಕರ್ಕಶ ಶಬ್ದ ಉಂಟು ಮಾಡುತ್ತಿದ್ದ 102 ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿದೆ. ಸಂಚಾರ ನಿಯಮದ ಕುರಿತು ಜಾಗೃತಿಗೆ ಎಂಟು ಸಾವಿರ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇ–ಚಲನ್‌ ಮೂಲಕ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಆಟೊಮೊಬೈಲ್‌ ಅಸೋಸಿಯೇಷನ್‌ನವರ ಸಹಯೋಗದೊಂದಿಗೆ ವೃತ್ತವನ್ನು ಬಹಳ ಸುಂದರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಸೆಲ್ಫಿ ಪಾಯಿಂಟ್‌, ಪೊಲೀಸ್‌ ಆ್ಯಕ್ಷನ್‌ ವೇಳೆ ಉಪಯೋಗಿಸಿದ ಗನ್‌ ಹೊಂದಿದ ಜೀಪ್‌, ಸಂಚಾರ ನಿಯಮಗಳ ಮಾಹಿತಿ ಒಳಗೊಂಡಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌ ಸೇರಿದಂತೆ ಇತರರಿದ್ದರು.

ನವೀಕರಣಗೊಂಡ ಪೊಲೀಸ್‌ ವೃತ್ತ
ನವೀಕರಣಗೊಂಡ ಪೊಲೀಸ್‌ ವೃತ್ತ
ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ವಾಹನಗಳ ಸೈಲೆನ್ಸರ್‌ ತೆಗೆಸಿದ ಪೊಲೀಸರು ಅವುಗಳನ್ನು ರೋಲರ್‌ ಮೂಲಕ ನಾಶಪಡಿಸಿದರು
ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ವಾಹನಗಳ ಸೈಲೆನ್ಸರ್‌ ತೆಗೆಸಿದ ಪೊಲೀಸರು ಅವುಗಳನ್ನು ರೋಲರ್‌ ಮೂಲಕ ನಾಶಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT