ಬೀದರ್: ನಗರದ ಬಸವೇಶ್ವರ ವೃತ್ತ ಸಮೀಪದ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆ ಹಾಗೂ ಚರಂಡಿ ದುರಸ್ತಿಗೆ ನಗರಸಭೆ ಮುಂದಾಗಿದೆ.
‘ಮತ್ತೆ ಆರ್ಭಟಿಸಿದ ಮಳೆರಾಯ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಶನಿವಾರ (ಆಗಸ್ಟ್ 17) ವರದಿ ಪ್ರಕಟಿಸಿತ್ತು. ಬಿರುಸಿನ ಮಳೆ ನೀರಿನೊಂದಿಗೆ ಚರಂಡಿ ಹೊಲಸು ನೀರು ಮುಖ್ಯರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು ಎಂದು ಚಿತ್ರಗಳ ಸಮೇತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ವರದಿಗೆ ಎಚ್ಚೆತ್ತುಕೊಂಡಿರುವ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್ ಅವರು ಅಧಿಕಾರಿ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು. ಆನಂತರ ಸ್ವಚ್ಛತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಎದುರು ನಿಂತು ಅವ್ಯವಸ್ಥೆ ಸರಿಪಡಿಸಿದರು.