ಭಾನುವಾರ, ಸೆಪ್ಟೆಂಬರ್ 20, 2020
22 °C

ಬುದ್ಧನ ಅವಶೇಷಗಳ ರಕ್ಷಣೆ: ನಾಳೆ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಉತ್ತರ ಪ್ರದೇಶದ ಸಾಕೇತ ನಗರ(ಅಯೋಧ್ಯ)ದ ಜಮೀನಿನಲ್ಲಿ ದೊರೆಯುತ್ತಿರುವ ಗೌತಮ ಬುದ್ಧನ ವಿಗ್ರಹ, ಸ್ತೂಪ ಹಾಗೂ ಇತರ ಅವಶೇಷಗಳ ರಕ್ಷಣೆಗೆ ಒತ್ತಾಯಿಸಿ ಬುದ್ಧಿಸ್ಟ್ ಇಂಟರ್‌ನ್ಯಾಷನಲ್ ನೆಟ್‍ವರ್ಕ್, ಭಾರತೀಯ ಬೌದ್ಧ ಮಹಾಸಭಾ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ನಗರದಲ್ಲಿ ಬುಧವಾರ (ಆ.5) ಮೆರವಣಿಗೆ ನಡೆಸಲು ನಿರ್ಧರಿಸಿವೆ.

ಅಂದು ಬೆಳಿಗ್ಗೆ 11 ಗಂಟೆಗೆ ಜನವಾಡ ರಸ್ತೆಯ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಲಾಗುವುದು ಎಂದು ಬುದ್ಧಿಸ್ಟ್ ಇಂಟರ್‌ನ್ಯಾಷನಲ್ ನೆಟ್‍ವರ್ಕ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶಕುಮಾರ ಜೋಜನಾಕರ್, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಗುನ್ನಳ್ಳಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.