ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಚುನಾವಣೆಗೆ ಆಗ್ರಹಿಸಿ ಸಿಪಿಐ ಜಿಲ್ಲಾ ಘಟಕದ ಕಾರ್ಯಕರ್ತರ ಪ್ರತಿಭಟನೆ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ
Last Updated 11 ನವೆಂಬರ್ 2022, 15:18 IST
ಅಕ್ಷರ ಗಾತ್ರ

ಬೀದರ್‌: ಸಂವಿಧಾನದ 74ನೇ ತಿದ್ದುಪಡಿಯಂತೆ ಪ್ರತಿ ಐದು ವರ್ಷಕ್ಕೊಮ್ಮೆ ನಗರಸಭೆ ಚುನಾವಣೆ ನಡೆಯಬೇಕು. ಅಧ್ಯಕ್ಷ, ಉಪಾಧ್ಯಕ್ಷರನ್ನೂ ಆಯ್ಕೆ ಮಾಡಬೇಕು. ಆದರೆ, ಚುನಾವಣೆ ನಡೆದು ಒಂದೂವರೆ ವರ್ಷ ಕಳೆದರೂ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೇ ಇರುವುದನ್ನು ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷದ (ಸಿಪಿಐ) ಜಿಲ್ಲಾ ಘಟಕದ ಕಾರ್ಯಕರ್ತರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರಸಭೆಯಲ್ಲಿ ಚುನಾಯಿತ ಮಂಡಳಿ ಇದ್ದರೂ ಕಾರ್ಯಭಾರ ನಡೆಸುವುದು ತೊಡಕಾಗಿದೆ. ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಪ್ಟೆಂಬರ್ 17ರಂದು ಪತ್ರ ಬರೆದು ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿಗಳು ತ್ವರಿತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಅಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಅಲಿ ಅಹಮದಖಾನ್, ಶಫಿಯತ್ ಅಲಿ, ರಾಮಯ್ಯ ಮಠಪತಿ, ನಜೀರ್ ಅಹ್ಮದ್ ಚೊಂಡಿ, ಮೌಲಾ ಮಹೆತಾಬಸಾಬ, ಪಾಂಡುರಂಗ ಪ್ಯಾಗೆ, ಶಿವಾಜಿರಾವ್ ಭೋಸ್ಲೆ, ಶೇಖ ನವಾ‌, ಸುನೀಲ ವರ್ಮಾ, ಶಿವರಾಜ ಕಮಠಾಣಾ, ಸೋಮನಾಥ ಪಂಚಾಳ, ರಾಜಕುಮಾರ ಬಗದಲ್‍ಕರ್, ಪ್ರಭು ತಗಣಿಕರ್, ನಿಜಾಮೋದ್ದಿನ್, ಈರಣ್ಣ ದಳಪತಿ, ಯಶವಂತ ಬೀರಿಕರ್, ಶಿವರಾಜ ಸಂಗೋಳಗಿ, ಚಾಂದೋಬಾ ಭೋಸ್ಲೆ, ರಾಮಣ್ಣಾ ಅಲ್ಮಾಸಪೂರ, ಲಕ್ಷ್ಮಣ ಮಾಳೆಗಾಂವಕರ್, ಎಂ.ಡಿ. ಖಮರ ಪಟೇಲ್, ಗುರುಪಾದಯ್ಯ ಸ್ವಾಮಿ, ಸತೀಷ ಸಾಗರ, ಮೊಗಲಪ್ಪಾ ಸುಂಧಾಳ, ಗೌಸೋದ್ದಿನ್ ನನ್ನೆಸಾಬ, ರಘುನಾಥ ಬಗದಲ್, ಅಬ್ದುಲ್ ಖಾದರ್ ಬಗದಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT