ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆಗೆ ಆಗ್ರಹ

Published : 4 ಆಗಸ್ಟ್ 2024, 14:21 IST
Last Updated : 4 ಆಗಸ್ಟ್ 2024, 14:21 IST
ಫಾಲೋ ಮಾಡಿ
Comments

ಬೀದರ್: ‘ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಬದೋಲೆ ಅವರನ್ನು ಆ.12ರ ಒಳಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಗುವುದು’ ಎಂದು ಕರ್ನಾಟಕ ಭೀಮ ಸೇನೆ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ ವಾಲ್ದೊಡ್ಡಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಳಾರ್ ಗ್ರಾಮದ ಪಿಡಿಒ ಕುಮದಾ ಮೇಲ್ಜಾತಿಯವರು ಎನ್ನುವ ಕಾರಣಕ್ಕೆ ಭ್ರಷ್ಟಾಚಾರದಲ್ಲಿ ತೊಡಗಿರುವ ಅವರ ಬೆಂಬಲಕ್ಕೆ ಸಿಇಒ ನಿಂತಿದ್ದಾರೆ. ತಾ.ಪಂ ಕಾರ್ಯ ನಿರ್ವಹನಾಧಿಕಾರಿ ಮಾಡಿರುವ ವರದಿಯಿಂದ ಗೊತ್ತಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘2023ರ ನವೆಂಬರ್ 26 ರಂದು ಕೊಳಾರ್ ಗ್ರಾಮ ಪಂಚಾಯಿತಿಯಲ್ಲಿ ಕಾಟಾಚಾರಕ್ಕೆ ಸಂವಿಧಾನ ದಿನಾಚರಣೆ ನಡೆಸಿ ಒಂದೇ ಗಂಟೆಯಲ್ಲಿ ಭಾವಚಿತ್ರ ಡಿಲಿಟ್ ಮಾಡುವ ಮೂಲಕ ದೇಶದ್ರೋಹಿ ಚಟುವಟಿಕೆಯಲ್ಲಿ ಪಿಡಿಒ ಭಾಗಿಯಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಿಜಾಂಪುರ, ಹಜ್ಜರಗಿ, ಕಮಲಪುರ ಗ್ರಾಮಗಳ ಶಾಲೆಗೆ ₹6 ಲಕ್ಷ ವೆಚ್ಚದಲ್ಲಿ ಟೆಂಡರ್ ಇಲ್ಲದೇ ಖರೀದಿಸಿದ್ದ ಕ್ರೀಡಾ ಸಾಮಗ್ರಿಗಳು ಕಾಣೆಯಾಗಿವೆ. ನರೇಗಾ ಯೋಜನೆಯಡಿ ಅಮೃತ ಗ್ರಾಮ ಯೋಜನೆ ಅಡಿ ತಾಲ್ಲೂಕಿನ ಬೆಳ್ಳೂರ್ ಗ್ರಾಮದ ಕೆರೆ ಸೌಂದರ್ಯಕ್ಕಾಗಿ ₹5 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ನಿಜಾಂಪುರ ಗ್ರಾಮದ ಸರ್ವೆ ನಂ. 3/2 ಸರ್ಕಾರಿ ಜಾಗದಲ್ಲಿ ಮ್ಯಾನವಲ್ ಖಾತಾ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT