ಸೋಮವಾರ, ಡಿಸೆಂಬರ್ 6, 2021
27 °C
ವಿವಿಧೆಡೆ ಶಿಕ್ಷಕರ ದಿನಾಚರಣೆ, ಶಿಕ್ಷಕರಿಗೆ ಸನ್ಮಾನ

ಜಿಲ್ಲೆಯಲ್ಲಿ ಡಾ. ರಾಧಾಕೃಷ್ಣನ್‍ಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ನಗರದ ವಿವಿಧೆಡೆ ಶನಿವಾರ ಶಿಕ್ಷಕರ ದಿನ ಆಚರಿಸಲಾಯಿತು.

ಬರೀದ್‍ಶಾಹಿ ಉದ್ಯಾನ: ಬರೀದ್‍ಶಾಹಿ ಉದ್ಯಾನದಲ್ಲಿ ಜೈ ಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಮಾತನಾಡಿದರು. ಉದ್ಯಮಿ ರಾಮಕೃಷ್ಣ ಮನಿಗ್ಯಾಲ ಅಧ್ಯಕ್ಷತೆ ವಹಿಸಿದ್ದರು.

ಯೋಗ ಮೇಲ್ವಿಚಾರಕ ಗಂಗಪ್ಪ ಸಾವಲೆ, ಯೋಗ ಶಿಕ್ಷಕ ವಿವೇಕ ಪಟ್ನೆ ಹಾಗೂ ಸಂಜುಕುಮಾರ ಶೀಲವಂತ ಅವರನ್ನು ಸನ್ಮಾನಿಸಲಾಯಿತು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು.

ಓಂ ಸಿದ್ಧಿ ವಿನಾಯಕ ಕಾಲೇಜು: ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಓಂ ಸಿದ್ಧಿ ವಿನಾಯಕ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯ ಸಿದ್ರಾಮ ಬಿಚಕುಂದೆ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಂಸ್ಥೆಯ ಕಾರ್ಯದರ್ಶಿ ಡಾ. ವಿಜಯಕುಮಾರ ಚೆಟ್ಟಿ, ನಿರ್ದೇಶಕರಾದ ಡಾ. ನಿತೇಶಕುಮಾರ ಬಿರಾದಾರ, ಶರಣಯ್ಯ ಸ್ವಾಮಿ, ಜಲಜಾ, ನವೀನ್, ಮಿಲದ್ ಇದ್ದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮನೋಜಕುಮಾರ ಅವರು ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀನಿವಾಸ ರೆಡ್ಡಿ, ಭೀಮಷಾ, ಮನೋಹರ ಮೇತ್ರಿ, ಸುಂದರರಾಜು, ವಿದ್ಯಾ ಪಾಟೀಲ, ಸಚ್ಚಿದಾನಂದ ರುಮ್ಮಾ, ಎಲಿಷಾ, ಸಂಜುಕುಮಾರ ಅಪ್ಪೆ, ಉಮಾಕಾಂತ ಜಾಧವ್, ಸಂಜೀವಕುಮಾರ ಪಾಟೀಲ ಉಪಸ್ಥಿತರಿದ್ದರು.

 

ಗ್ಲೋಬಲ್ ಸೈನಿಕ ಅಕಾಡೆಮಿ:

ನಗರದ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಸಿಕೇನಪುರ ಅವರು ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವಿಶ್ವದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶಿಕ್ಷಕರೇ ಕಾರಣಕರ್ತರು ಎಂದು ಅವರು ಹೇಳಿದರು.
ಶಾಲೆಯ ಸಿಬ್ಬಂದಿ ಇದ್ದರು.

ಗವಾಯಿ ವಿದ್ಯಾಲಯ:

ಇಲ್ಲಿಯ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವಿ.ಎಂ. ಡಾಕುಳಗಿ ಮಾತನಾಡಿದರು.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ವೀರಭದ್ರಪ್ಪ ಉಪ್ಪಿನ್, ಡಾ. ಸುರೇಶ ಮಾಶೆಟ್ಟಿ ಮಾತನಾಡಿದರು.
ಪ್ರೊ. ದೇವೇಂದ್ರ ಕಮಲ್, ಗಂಗಪ್ಪ ಸಾವಳೆ, ಲಕ್ಷ್ಮಣರಾವ್ ಆಚಾರ್ಯ, ಸಂಗೀತ ಶಿಕ್ಷಕ ವಿಘ್ನೇಶ್ವರ ಹಿರೇಮಠ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಬಾಬುರಾವ್ ದಾನಿ ಸ್ವಾಗತಿಸಿದರು. ಪಂಚಾಕ್ಷರಿ ಕಲ್ಮಠ ವಂದಿಸಿದರು.

ಕರ್ನಾಟಕ ಕಾಲೇಜು:

ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಮಾತನಾಡಿದರು.
ನಿವೃತ್ತ ಪ್ರಾಚಾರ್ಯರಾದ ಡಾ. ಆರ್.ಎಸ್. ಹತ್ತಿ, ಡಾ. ಎಂ.ಎಸ್. ಪಾಟೀಲ, ಡಾ. ಕಲ್ಪನಾ ದೇಶಪಾಂಡೆ, ಪ್ರೊ. ಎಸ್.ವಿ. ಜೂಜಾ, ಪ್ರೊ. ಬಿ.ಎಸ್. ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಡಾ. ಶಶಿಧರ ಪಾಟೀಲ, ಪ್ರೊ. ಗೀತಾ ಪೋಸ್ತೆ, ಡಾ. ಮಹಾನಂದ ಮಡಕಿ, ಡಾ. ಸುನೀತಾ ಕೂಡ್ಲಿಕರ್, ಡಾ. ಸುರೇಖಾ ಬಿರಾದಾರ, ಡಾ. ಸಂಗೀತಾ ಮಾನಾ ಇದ್ದರು.
ಅನಿಲಕುಮಾರ ಚಿಕ್ಕಮಾಣೂರ ನಿರೂಪಿಸಿದರು. ಡಾ. ಡಿ.ಬಿ. ಕುಂಬಾರ ವಂದಿಸಿದರು.

ಹಳ್ಳಿಖೇಡ(ಬಿ):

ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಡಾ. ಬಿ.ಆರ್. ಅಂಬೇಢ್ಕರ್ ಪದವಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಹಣಮಂತರಾವ್ ಮೈಲಾರೆ ಮಾತನಾಡಿದರು.
ಪದವಿ ಕಾಲೇಜು ಪ್ರಾಚಾರ್ಯ ಮಹಮ್ಮದ್ ಗಫೂರ್, ಉಪನ್ಯಾಸಕ ಸುರೇಶ ಕುಲಕರ್ಣಿ, ಚಂದ್ರಶೇಖರ ರೆಡ್ಡಿ, ರವಿ ಕಲ್ಯಾಣಿ, ವೈಜಿನಾಥ ಮಡಕೆ ಇದ್ದರು.

ಬೀದರ್‌ನ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ವಿಘ್ನೇಶ್ವರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.