ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ

Published 5 ಜುಲೈ 2024, 13:54 IST
Last Updated 5 ಜುಲೈ 2024, 13:54 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಹಲವೆಡೆ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಬೀದರ್‌ ನಗರದಲ್ಲಿ ಶುಕ್ರವಾರ ದಿನವಿಡೀ ಬಿಸಿಲಿತ್ತು. ಸಂಜೆ ದಟ್ಟ ಕಾರ್ಮೋಡ ಕವಿದು, ಮಳೆ ಸುರಿಯಿತು. ನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವರ್ಷಧಾರೆಯಾಗಿದೆ. ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದರಿಂದ ದೈನಂದಿನ ಕೆಲಸ ಮುಗಿಸಿಕೊಂಡು ಮನೆ ಸೇರಬೇಕಾದವರು ತೀವ್ರ ಪರದಾಟ ನಡೆಸಿದರು.

ಅನೇಕರು ಮಳಿಗೆ, ಹೋಟೆಲ್‌ಗಳ ಮುಂಭಾಗ ಬೈಕ್‌ ನಿಲ್ಲಿಸಿ, ಕಟ್ಟಡದೊಳಗೆ ಆಶ್ರಯ ಪಡೆದದ್ದು ಕಂಡು ಬಂತು. ಅರ್ಧ ಗಂಟೆಗೂ ಹೆಚ್ಚು ಕಾಲ ಸತತ ಮಳೆ ಸುರಿದ ಕಾರಣ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು, ವಾಹನಗಳ ಸಂಚಾರ ನಿಧಾನಗೊಂಡಿತು.

ಜಿಲ್ಲೆಯ ಬಸವಕಲ್ಯಾಣ, ಹುಲಸೂರ, ಹುಮನಾಬಾದ್‌, ಭಾಲ್ಕಿ ತಾಲ್ಲೂಕಿನಲ್ಲಿಯೂ ವರ್ಷಧಾರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT