ಆಣದೂರು (ಜನವಾಡ): ಮಳೆ ನೀರು ಸಂರಕ್ಷಣೆ ಕುರಿತು ನೆಹರೂ ಯುವ ಕೇಂದ್ರ ಹಾಗೂ ಮಾಡಗೂಳದ ಭಗತ್‍ಸಿಂಗ್ ಯುವ ಕ್ರಾಂತಿ ಕಲಾವಿದರ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರು ಹಾಗೂ ಕೊಳಾರ(ಕೆ) ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.
ಮಳೆ ನೀರು ಸಂಗ್ರಹಣೆ ಹಾಗೂ ಮರು ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಮಳೆ ನೀರು ಸಂಗ್ರಹಕ್ಕೆ ಪ್ರತಿ ಮನೆಗಳಲ್ಲೂ ಇಂಗು ಗುಂಡಿ ತೋಡಬೇಕು. ಮನೆ ಛಾವಣಿ ಮೇಲೆ ಬೀಳುವ ಮಳೆ ನೀರು ಗುಂಡಿಗೆ ಸೇರುವಂತೆ ವ್ಯವಸ್ಥೆ ಮಾಡಬೇಕು ಎಂದು ನೆಹರೂ ಯುವ ಕೇಂದ್ರದ ಲಕ್ಷ್ಮಣ ಪಿ. ಮಚ್ಕೊರೆ ಹೇಳಿದರು.
ಮಳೆ ನೀರನ್ನು ಬಟ್ಟೆ ತೊಳೆಯಲು, ಕೈತೋಟಕ್ಕೆ, ಮರ, ಗಿಡಗಳಿಗೆ ಬಳಸಬಹುದು ಎಂದು ತಿಳಿಸಿದರು.
ನೀರು ಬಹಳ ಅಮೂಲ್ಯವಾಗಿದೆ. ಕಾರಣ, ಹಿತ ಮಿತವಾಗಿ ಬಳಸಬೇಕು. ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಹೇಳಿದರು.
ಕಲಾವಿದರಾದ ಸಾರಿಕಾ, ರಜನಿಕಾ, ಉದಿತ್ ರಾಠೋಡ್, ಬೀರಗೊಂಡ ಮೇತ್ರೆ, ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.