ಬೀದರ್: ವಿಶ್ವ ಹಿಂದೂ ಪರಿಷತ್‍ನಿಂದ ನಗರದಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು.
ಪರಿಷತ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಬೀದರ್ ಡಿವೈಎಸ್‍ಪಿ ಕೆ.ಎಂ. ಸತೀಶ್, ಗಾಂಧಿಗಂಜ್ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಮಲ್ಲಮ್ಮ ಚೌಬೆ ಅವರಿಗೆ ರಾಖಿ ಕಟ್ಟಿ ಹಬ್ಬದ ಶುಭ ಕೋರಿದರು.
ಗಾಂಧಿಗಂಜ್ ಠಾಣೆಯಲ್ಲಿ ವಿಚಾರಣಾಧೀನ ಕೈದಿ, ಗುಂಪಾ ರಸ್ತೆಯಲ್ಲಿ ಕಾರ್ಮಿಕರಿಗೂ ರಾಖಿ ಕಟ್ಟಿ ಗಮನ ಸೆಳೆದರು.
ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವ ಇದೆ. ರಕ್ಷಾ ಬಂಧನ ಸೋದರ ಬಾಂಧವ್ಯ ಬೆಸೆಯುವ ಪವಿತ್ರ ಹಬ್ಬವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ ಹೇಳಿದರು.
ಉಪಾಧ್ಯಕ್ಷೆ ಕಲ್ಪನಾ ದೇಶಪಾಂಡೆ, ಕಾರ್ಯದರ್ಶಿ ಸತೀಶ ನೌಬಾದೆ, ಜಂಟಿ ಕಾರ್ಯದರ್ಶಿ ರಾಜಕುಮಾರ ಅಳ್ಳೆ, ಬೀದರ್ ನಗರ ಘಟಕದ ಅಧ್ಯಕ್ಷ ವೀರೇಂದ್ರ ಶಾಸ್ತ್ರಿ, ಸದಸ್ಯರಾದ ಕಾಮಶೆಟ್ಟಿ ಚಿಕ್ಕಬಸೆ, ಸಂಗೀತಾ, ಶ್ರೀಕಾಂತ ಮೋದಿ, ಬಜರಂಗ ದಳ ಜಿಲ್ಲಾ ಸಂಯೋಜಕ ಸುನೀಲ್ ದಳವೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.