‘ಕಂಡದ್ದು ಕೈ ಬರಹದಲ್ಲಿ’ ಕೃತಿ ಬಿಡುಗಡೆ

ಜನವಾಡ: ಬೀದರ್ ತಾಲ್ಲೂಕಿನ ಬಗದಲ್‍ನಲ್ಲಿ ನವರಸ ಕಲಾ ಲೋಕ ಹಾಗೂ ಬಗದಲ್ ಗೆಳೆಯರ ಬಳಗದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸಾಹಿತಿ ವಿನೋದ ಹೊನ್ನಾ ರಚಿತ ‘ಕಂಡದ್ದು ಕೈ ಬರಹದಲ್ಲಿ’ ಕೃತಿ ಬಿಡುಗಡೆ ಮಾಡಿದರು.
ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕು ಎಂದು ಹೇಳಿದರು.
ವಿನೋದ ಹೊನ್ನಾ ಅವರ ಕೃತಿ ಮಾದರಿಯಾಗಿದೆ ಎಂದು ನುಡಿದರು.
ನವರಸ ಕಲಾ ಲೋಕದ ಅಧ್ಯಕ್ಷ ವೈಜಿನಾಥ ಸಜ್ಜನಶೆಟ್ಟಿ ಕೃತಿ ಪರಿಚಯ ಮಾಡಿಕೊಟ್ಟರು.
ಬೇಮಳಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ವಕೀಲ ಬಾಬುರಾವ್ ಹೊನ್ನಾ, ಉಮೇಶ ಮೂಲಿಮನಿ, ರವಿ ಶಂಕರ ಶೆಟ್ಟಿ ಉಪಸ್ಥಿತರಿದ್ದರು.
ಲೇಖಕ ವಿನೋದ ಹೊನ್ನಾ ಸ್ವಾಗತಿಸಿದರು. ಪ್ರಶಾಂತ ಹೊನ್ನಾ ನಿರೂಪಿಸಿದರು. ಮಹೇಶ ಹೊನ್ನಾ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.