ನಾವದಗಿ: ರೇವಪ್ಪಯ್ಯ ಮುತ್ಯಾರ ಷಣ್ಮುಖಸ್ವಾಮಿ ಬಿನ್ನಹ ಜಾತ್ರೆ ಸಂಭ್ರಮ ಹೂರಣಗಡುಬು, ತುಪ್ಪ ಸವಿದ ಸಾವಿರಾರು ಭಕ್ತರು

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ನಾವದಗಿಯ ರೇವಪ್ಪಯ್ಯ ಮಂದಿರದಲ್ಲಿ ಕಾರಹುಣ್ಣಿಮೆಯ ನಂತರದ ಮೊದಲ ಮಂಗಳವಾರ ಪ್ರತಿ ವರ್ಷದಂತೆ ಹೋಳಿಗೆ (ಹೂರಣಗಡುಬು)– ತುಪ್ಪದ ಪ್ರಸಾದ ಸವಿಯುವ ಷಣ್ಮುಖಸ್ವಾಮಿ ಬಿನ್ನಹ ಜಾತ್ರೆ ಸಂಭ್ರಮದಿಂದ ನಡೆಯಿತು.

ಪ್ರಾರಂಭದಲ್ಲಿ ಸದ್ಗುರು ರೇವಪ್ಪಯ್ಯ ಸ್ವಾಮೀಜಿ ಗದ್ದುಗೆಗೆ ಪೂಜೆ ನೆರವೇರಿಸಿ, 21 ಮಹಿಳೆಯರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪ್ರಸಾದಿಕರಿಗೆ ಪ್ರಸಾದ ನೀಡಿ, ಬೆಳಿಗ್ಗೆಯಿಂದಲೇ ಮಹಾ ಪ್ರಸಾದಕ್ಕೆ ವ್ಯವಸ್ಥೆ ಪ್ರಾರಂಭಿಸಲಾಯಿತು. ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

‘ಹೂರಣಗಡುಬು–ತುಪ್ಪದ ದಾಸೋಹಕ್ಕೆ 300 ಕೆ.ಜಿ.ತುಪ್ಪ, 200 ಕೆ.ಜಿ. ಕಡಲೆ ಬೇಳೆಯ ಹೂರಣದ ಕಡುಬು ಖರ್ಚಾಯಿತು’ ಎಂದು ಜಾತ್ರಾ ಸಮಿತಿ ತಿಳಿಸಿದೆ.

ಜಾತ್ರೆಯಲ್ಲಿ ರೇವಪ್ಪಯ್ಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರದೀಪ ಪಾಟೀಲ, ಪ್ರಮುಖರಾದ ರೇವಣಯ್ಯ ಸ್ವಾಮಿ, ಶಾಂತವೀರ ಸ್ವಾಮಿ, ಹಾವಯ್ಯ ಸ್ವಾಮಿ, ಸಿದ್ದಲಿಂಗ ಸ್ವಾಮಿ, ಪ್ರಭುಲಿಂಗ ಸ್ವಾಮಿ, ರೇವಪ್ಪಯ್ಯ ಟ್ರಸ್ಟ್ ಕಮಿಟಿ ಸದಸ್ಯರಾದ ಮಲ್ಲಿಕಾರ್ಜುನ ಶೇರಿಕಾರ, ಶಿವಪ್ಪ ಕಲ್ಯಾಣರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಬಿರಾದಾರ, ಶಿವರಾಜ ಬಿರಾದಾರ ಸೇರಿದಂತೆ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.