ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ: ಬನ್ನಳ್ಳಿ ದೇಗುಲದ ಜೀರ್ಣೋದ್ಧಾರಕ್ಕೆ ₹2.50 ಕೋಟಿ ಅನುದಾನ

Published 23 ಫೆಬ್ರುವರಿ 2024, 16:28 IST
Last Updated 23 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಬನ್ನಳ್ಳಿ ಗ್ರಾಮದ ಐತಿಹಾಸಿಕ ಶಿಲ್ಪಕಲಾ ರಾಮಲಿಂಗೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ಭಾರತೀಯ ಪುರಾತತ್ವ ಇಲಾಖೆಯಿಂದ ₹2.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ ಶ್ರಮದಿಂದ ಬಿಡುಗಡೆಯಾಗಿದ್ದು, ಬೇಗ ದೇಗುಲದ ನಿರ್ಮಾಣ ಕಾರ್ಯ ಆರಂಭವಾಗುತ್ತದೆ’ ಎಂದು ಹಂಪಿಯ ಪುರಾತತ್ವ ಇಲಾಖೆ ಅಧೀಕ್ಷಕ ಡಾ.ನಿಹೆಲ್ ದಾಸ್ ಹೇಳಿದರು.

ತಾಲ್ಲೂಕಿನ ಬನ್ನಳ್ಳಿ ಗ್ರಾಮದ ದೇಗುಲಕ್ಕೆ ಶುಕ್ರವಾರ ಧಾರವಾಡದ ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ, ಬೀದರನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಗ್ರಾಮಸ್ಥರ ಸಹಕಾರದಿಂದ ಗುಣಮಟ್ಟದ ಕಾಮಗಾರಿ ನಡೆಸಿ ಉತ್ತಮ ರೀತಿಯ ದೇಗುಲ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಬರಣಿ ಧರನ್, ಬೀದರ್ ಉಪವಲಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ, ಗ್ರಾಮದ ಗಣ್ಯರಾದ ಹಣಮಂತರಾವ ಪಾಟೀಲ, ಶಿವಾನಂದ ಪಾಟೀಲ, ಬಾನಪ್ಪ ಜಮಾದಾರ, ಚಂದ್ರಶೇಖರ ಪಾಟೀಲ್, ರಾಜರೆಡ್ಡಿ ಚೌಲಾ, ಮಂಜುನಾಥ ಸಲಗಾರ, ವೀರಾರೆಡ್ಡಿ, ಗುರುನಾಥ ಬಿರಾದರ ಪುಂಡಲೀಕ ಬಿರಾದರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT