ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಹೆದ್ದಾರಿ ಅಭಿವೃದ್ಧಿಗೆ ₹ 73 ಕೋಟಿ ಅನುದಾನ

Last Updated 22 ಜನವರಿ 2022, 15:28 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಬಾಪೂರ-ಮಹೆಬೂಬ್‍ನಗರ ರಾಷ್ಟ್ರೀಯ ಹೆದ್ದಾರಿ 167(ಎನ್‌ಎಚ್‌) ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹703.68 ಕೋಟಿ ಅನುದಾನ ಘೋಷಿಸಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ರಸ್ತೆಯು ಬಾಪೂರದಿಂದ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಂಚೋಳಿ ತಾಲ್ಲೂಕಿನ ತುಮಕುಂಟಾ, ಚಿಂಚೋಳಿ ಪಟ್ಟಣ, ಕೊಂಚಾವರಂ ಕ್ರಾಸ್, ಮಿರಿಯಾಣ, ತಾಂಡೂರ, ಕೊಡಂಗಲ್ ಮಾರ್ಗವಾಗಿ ಮಹೆಬೂಬ್‍ನಗರ ವರೆಗೆ ನಿರ್ಮಾಣವಾಗಿದೆ. ಬೀದರ್ ಕ್ಷೇತ್ರದಲ್ಲಿ ಒಟ್ಟು 49 ಕಿ.ಮೀ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇದೀಗ ಹೆದ್ದಾರಿ ನಿರ್ಮಾಣದ ಸಿಹಿ ಸುದ್ದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

2014ರ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಎಲ್ಲ ರಂಗಗಳಲ್ಲೂ ಸಾಧನೆ ಮಾಡಿದೆ. ಬೀದರ್ ಕ್ಷೇತ್ರದಲ್ಲೂ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಜನ ಅದನ್ನು ಮನಗಂಡಿದ್ದಾರೆ. ಅಭಿವೃದ್ಧಿಯ ಸವಿ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT