ಸೋಮವಾರ, ಆಗಸ್ಟ್ 8, 2022
21 °C

ಪರುಷಕಟ್ಟೆಯಲ್ಲಿ ಸಲಗರ ಅಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಶಾಸಕರಾಗಿ ಆಯ್ಕೆಗೊಂಡಿರುವ ಶರಣು ಸಲಗರ ಅವರು ಭಾನುವಾರ ಮತ ಎಣಿಕೆಯ ನಂತರ ಬೀದರ್‌ನಿಂದ ನೇರವಾಗಿ ನಗರದ ಐತಿಹಾಸಿಕ ಸ್ಥಳ ಬಸವಣ್ಣನವರ ಪರುಷಕಟ್ಟೆಗೆ ಬಂದು ಅಭಿಷೇಕ, ವಿಶೇಷ ಪೂಜೆಗೈದರು.

ನಂತರ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಇದ್ದರು.

ಸಂಭ್ರಮ: ಶರಣು ಸಲಗರ ಅವರು ವಿಜೇತರಾದ ಸುದ್ದಿ ತಿಳಿಯುತ್ತಲೇ ನಗರದ ಅವರ ಸಂಪರ್ಕ ಕಚೇರಿಯಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಹಿರೇನಾಗಾಂವ, ಮಂಠಾಳ, ಉಜಳಂಬ, ಕೊಹಿನೂರ, ಬಟಗೇರಾ, ಹುಲಸೂರ, ನಾರಾಯಣಪುರ, ಮುಡಬಿ ಯಲ್ಲಿಯೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿದರು.

ಹರ್ಷ: ಸಲಗರ ವಿಜೇತರಾಗಿದಕ್ಕೆ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಕೃಷ್ಣಾ ಗೋಣೆ, ಪ್ರಮುಖರಾದ ದೀಪಕ ಗಾಯಕವಾಡ, ಸಂಜೀವ ಜಾಧವ, ಅರವಿಂದ ಮುತ್ತೆ, ರತಿಕಾಂತ ಕೊಹಿನೂರ, ಬಸವರಾಜ ಸ್ವಾಮಿ ಬಟಗೇರಾ, ಸಂಜೀವ ಸುಗೂರೆ, ಸದಾನಂದ ಪಾಟೀಲ, ಸಿದ್ದು ಬಿರಾದಾರ, ಹಣಮಂತ ಧನಶೆಟ್ಟಿ, ಶಿವು ಕಲ್ಲೋಜಿ, ಶಿಕುಮಾರ ಶೆಟಗಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು