ಗುರುವಾರ , ಸೆಪ್ಟೆಂಬರ್ 29, 2022
26 °C
11 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು

ಸಪ್ತಗಿರಿ ಕಾಲೇಜು: ನೀಟ್ ಸಾಧಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ (ನೀಟ್) ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಇಲ್ಲಿಯ ಸಪ್ತಗಿರಿ ಪದವಿಪೂರ್ವ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

ಅಖಿಲ ಭಾರತ ಮಟ್ಟದಲ್ಲಿ 9,226ನೇ ರ್‍ಯಾಂಕ್ ಗಳಿಸಿದ ವಿಷ್ಣುವರ್ಧನ್ ಭೀಮರಾವ್, 10,543ನೇ ರ್‍ಯಾಂಕ್ ಪಡೆದ ಪವನಕುಮಾರ ಪ್ರಭು, ಅಧಿಕ ಅಂಕ ಪಡೆದು ಸರ್ಕಾರಿ ಕೋಟಾದಡಿ ಉಚಿತ ವೈದ್ಯಕೀಯ ಸೀಟಿಗೆ ಅರ್ಹತೆ ಗಳಿಸಿರುವ ಭವಾನಿ ಗಣಪತಿ, ಶಿವಾನಿ ಸೈಬಣ್ಣ, ದಿವ್ಯಾ ದೇವಿದಾಸ, ಅಪೂರ್ವ ಮಹೇಶ, ಕಾವೇರಿ ಲಕ್ಷ್ಮಣ, ಅಭಿಷೇಕ ಶಿವಾಜಿರಾವ್ ಸಂತೋಷ ರವಿ, ರಾವಣ್ಣ ವೀರಶೆಟ್ಟಿ, ಸುದೀಕ್ಷಿತ್ ಸತೀಶ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗುಣಮಟ್ಟದ ಶಿಕ್ಷಣದಿಂದಾಗಿ ಕಾಲೇಜಿಗೆ ಪ್ರಸಕ್ತ ವರ್ಷದ ನೀಟ್, ಸಿಇಟಿ, ಜೆಇಇ ಮೇನ್ಸ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದೊರಕಿದೆ. ಈ ಬಾರಿ 11 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.

ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಡಿ. ತಾಂದಳೆ, ಸಪ್ತಗಿರಿ ಪದವಿಪೂರ್ವ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ, ಪ್ರೌಢಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ಉಪನ್ಯಾಸಕ ಅನಿಲಕುಮಾರ ಜಾಧವ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು