ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ ಕುಲದ ಕಲ್ಯಾಣ ಎಲ್ಲಾ ಧರ್ಮಗಳ ತಿರುಳು’

Published 14 ಮಾರ್ಚ್ 2024, 6:23 IST
Last Updated 14 ಮಾರ್ಚ್ 2024, 6:23 IST
ಅಕ್ಷರ ಗಾತ್ರ

ಬೀದರ್‌: ‘ಮಾನವ ಕುಲದ ಕಲ್ಯಾಣ ಎಲ್ಲಾ ಧರ್ಮಗಳ ತಿರುಳು’ ಎಂದು ಹೋರಾಟಗಾರ್ತಿ ನಜ್ಮಾ ನಜೀರ್‌ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕದಿಂದ ಇತ್ತೀಚೆಗೆ ಏರ್ಪಡಿಸಿದ್ದ ಎರಡನೇ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿದರು.

ಹಿಂದೂ ಧರ್ಮದಲ್ಲಿರುವ ಪರಂಪರೆ, ಸಂಸ್ಕಾರಗಳಲ್ಲಿರುವ ಮೇಲು– ಕೀಳು ಎನ್ನುವ ಅಸಮಾನತೆ ತೆಗೆದಾಗ ಉತ್ತಮ ಸಮಾಜ ಕಟ್ಟಲು ಸಾಧ್ಯ. ಎಲ್ಲ ಧರ್ಮಗಳ ತಿರುಳು ಒಂದೇ ಆಗಿದೆ. ಬುದ್ದ ರಾಜ್ಯವೈಭವ ಬಿಟ್ಟು ಕಾಡಿಗೆ ಹೋಗಿ ಧರ್ಮದ ಸುಜ್ಞಾನ ಪಡೆದು ವಿಶ್ವದ ನೆಲದೊಳಗೆ ನಡೆದಾಡಿ ಪ್ರೀತಿ, ಕರುಣೆ, ಮಮತೆ, ಸಮತೆಶೀಲ ಹಂಚಿದ ಎಂದರು.

12ನೇ ಶತಮಾನದಲ್ಲಿ ಶರಣ ಸಂಕುಲವನ್ನು ಕಟ್ಟಿ, ಜಾತಿ– ಮತ ಮೀರಿ ಮನುಷ್ಯತ್ವಕ್ಕಾಗಿ, ಸಮಾನತೆಗಾಗಿ ಶರಣರು ಶ್ರಮಿಸಿದರು ಎಂದು ತಿಳಿಸಿದರು.

ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಹಾರಾಜರು, ಭಂತೆ ಸಂಘ ರಕ್ಷಿತಾ ಸಂಭಾಜಿ ಮಹಾರಾಜ, ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ಮುಖಂಡರಾದ ಅನಿಲಕುಮಾರ ಬೇಲ್ದಾರ, ಅಮೃತರಾವ ಚಿಮಕೋಡೆ, ಬಾಬುರಾವ್ ಪಾಸ್ವಾನ್‌, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟೆ, ಸುಬ್ಬಣ್ಣ ಕರಕನಳ್ಳಿ, ಬಸವರಾಜ ಮಾಳಗೆ, ವಿಶಾಲ ದೊಡ್ಡಿ, ದೀಪಕ ಗಾದಗೆ, ಎಂ.ಡಿ. ಜಿಲಾನಿ, ಅಂಬಾದಾಸ ಗಾಯಕವಾಡ, ನಾಗಪ್ಪಾ ಮುಸ್ತಾಪೂರೆ, ರವೀನಾ ಗೌತಮ ಮೇತ್ರೆ, ರಮೇಶ ಪಾಸ್ವಾನ್‌,  ಸೂರ್ಯಕಾಂತ ಸಾಧುರೆ, ಸಂದೀಪ ಕಾಂಟೆ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT