ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸೇವೆ ನೀಡುತ್ತಿರುವ ತೃಪ್ತಿ: ಶ್ರೀದೇವಿ ಮಲ್ಲಿಕಾರ್ಜುನ

Last Updated 2 ಮೇ 2021, 7:01 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕುಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ನಿತ್ಯಸರಾಸರಿ 200 ಜನ ತಮ್ಮ ಆರೋಗ್ಯ ತಪಾಷಣೆಗೆ ಬರುತ್ತಿದ್ದಾರೆ. ಅವರಲ್ಲಿ ಕೋವಿಡ್‌ ಲಸಿಕೆ ಪಡೆಯಲು ಬರುವವರ ಸಂಖ್ಯೆ ಹೆಚ್ಚು.

ನಮ್ಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾದಿಯರ ಸಂಖ್ಯೆ ಕಡಿಮೆ ಇದ್ದ ಕಾರಣ ಇಡೀ ದಿನ ಬಿಡುವಿಲ್ಲದೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ.

ಕುಟುಂಬ ನಿರ್ವಹಣೆಯ ಜವಾಬ್ದಾರಿಯ ಜೊತೆಗೆ ಆಸ್ಪತ್ರೆಯಲ್ಲಿಯೂ ಸಮರ್ಪಣಾ ಮನೋಭಾವದಿಂದಕೆಲಸ ಮಾಡುತ್ತಿದ್ದೇವೆ.

ಒಂದು ಕಡೆ ಕೋವಿಡ್‌ ರೋಗಿಗಳು. ಇನ್ನೊಂದೆಡೆ ಸಾಮಾನ್ಯ ರೋಗಿಗಳು. ಅವರೆಲ್ಲರ ಕಡೆ ಗಮನ ಹರಿಸುವ ಒತ್ತಡ ನಮ್ಮ ಮೇಲೆ ಇದೆ. ಆದರೂ ನಾವು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇವೆ. ಆ ತೃಪ್ತಿ ನಮಗಿದೆ.

ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲಾ ಆಡಳಿತ ಹೆಚ್ಚಿನ ಸಿಬ್ಬಂದಿ ಸೇವೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT