ಬೀದರ್: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ವೀರ ಸಾವರ್ಕರ್ ಅವರ ಜಯಂತಿ ಆಚರಿಸಲಾಯಿತು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಅವರು ಸಾವರ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿನಾಯಕ ದಾಮೋದರ ಸಾವರ್ಕರ್ ಅವರು ಇಡೀ ಜೀವನ ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದರು.

ಸಾವರ್ಕರ್ ಒಬ್ಬ ಹೋರಾಟಗಾರ, ಲೇಖಕರಾಗಿದ್ದರು. ‘ಕಮಲಾ’, ‘ನನ್ನ ಜೀವಾವಧಿ ಶಿಕ್ಷೆ’, ‘1857 ಭಾರತದ ಸ್ವಾತಂತ್ರ್ಯ ಸಂಗ್ರಾಮ’, ‘ಕಾಲಾ ಪಾನಿ’, ‘ಹಿಂದೂ ಪದಪಾದಶಾಹಿ’, ‘ನನ್ನ ಆಜೀವ ಸಾಗಾಟ’ವೆಂಬ ಕೃತಿಗಳ ಮೂಲಕ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕುವಂತೆ ಮಾಡಿದ್ದರು ಎಂದು ನೆನಪಿಸಿದರು.

ಶಾಸಕ ಎಸ್.ಸುರೇಶಕುಮಾರ ವೀರ ಸಾವರ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಮುಖರಾದ ಬಾಬು ವಾಲಿ, ರಾಜಶೇಖರ ನಾಗಮೂರ್ತಿ, ರಾಜಕುಮಾರ ಪಾಟೀಲ ನೆಮತಾಬಾದ, ಗೋಪಾಲ, ವಿದ್ಯಾಸಾಗರ ಕುಲಕರ್ಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.