ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃತ್ತಿಯ ಪಾವಿತ್ರ್ಯ ಅರಿತು ಕೆಲಸ ಮಾಡಿ’

Last Updated 19 ಡಿಸೆಂಬರ್ 2019, 10:00 IST
ಅಕ್ಷರ ಗಾತ್ರ

ಭಾಲ್ಕಿ: ಭಾವಿ ಶಿಕ್ಷಕರು ಶಿಕ್ಷಕ ವೃತ್ತಿಯ ಪಾವಿತ್ರ್ಯ ಅರಿತು ಕಾರ್ಯ ನಿರ್ವಹಿಸಲು ಮುಂದಾಗಬೇಕು ಎಂದು ಜಿ.ಜೆ.ಗುಜ್ಜಮ್ಮಾ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ನಾಗಯ್ಯಾ ಸ್ವಾಮಿ ಹೇಳಿದರು.

ಪಟ್ಟಣದ ಜಿ.ಜೆ.ಗುಜ್ಜಮ್ಮಾ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ನಿಮಿತ್ತ ಆಯೋಜಿಸಿದ್ದ ದೀಪದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಪಂಚದ ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಪವಿತ್ರ. ಇದನ್ನು ಆಯ್ಕೆ ಮಾಡಿಕೊಂಡು, ತರಬೇತಿ ಪಡೆಯಲು ಆಗಮಿಸಿದ ಪ್ರಶಿಕ್ಷಣಾರ್ಥಿಗಳು ಧನ್ಯರಾಗಿದ್ದಾರೆ. ಒಬ್ಬ ವೈದ್ಯ ತನ್ನ ವೃತ್ತಿಯಲ್ಲಿ ವಿಫಲನಾದರೆ ಒಬ್ಬ ರೋಗಿ ಸಾವನ್ನಪ್ಪಬಹುದು. ಎಂಜಿನಿಯರ್ ತನ್ನ ವೃತ್ತಿಯಲ್ಲಿ ವೈಫಲ್ಯ ಹೊಂದಿದರೆ ಒಂದು ಕಟ್ಟಡ ಬೀಳಬಹುದು. ಆದರೆ ಒಬ್ಬ ಶಿಕ್ಷಕ ತನ್ನ ವೃತ್ತಿಯಲ್ಲಿ ವಿಫಲನಾದರೆ ಒಂದು ಸಮಾಜವೇ ನಾಶವಾಗುತ್ತದೆ ಎಂದು ಹೇಳಿದರು.

ಮಾಧ್ಯಮಿಕ ಶಿಕ್ಷಕರ ಸಂಘದ ಅದ್ಯಕ್ಷ ಗಣಪತಿ ಬೋಚರೆ, ಸತ್ಯನಿಕೇತನ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಜಿ.ಬಿ.ಸ್ವಾಮಿ, ಮಹಾತ್ಮ ಗಾಂಧಿ ಪ್ರೌಢ ಶಾಲೆ ಕಲವಾಡಿಯ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಶಿಕ್ಷಕ ವೃತ್ತಿಯ ಮಹತ್ವ ಕುರಿತು ಮಾತನಾಡಿದರು.

ಆಡಳಿತಾಧಿಕಾರಿ ಸಂಗಮೇಶ ಮಾತನಾಡಿದರು. ಪ್ರಾಚಾರ್ಯ ನಾಗೇಂದ್ರ ಬಿರಾದಾರ, ಉಪನ್ಯಾಸಕ ಮಲ್ಲಿಕಾರ್ಜುನ, ಉಪನ್ಯಾಸಕಿ ಅರುಣಾ ಹಾಗೂ ದೀಪಕ್‌ ಇದ್ದರು.ಪ್ರಶಿಕ್ಷಣಾರ್ಥಿ ಅರುಣಾ ಸ್ವಾಗತಿಸಿದರು. ಮೀನಾಕ್ಷಿ ನಿರೂಪಿಸಿದರು. ಮಲ್ಲಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT