ಶುಕ್ರವಾರ, ಮೇ 7, 2021
26 °C

ಶಾಹೀನ್‌ ಶಿಕ್ಷಣ ಸಂಸ್ಥೆಯಿಂದ ನಿತ್ಯ 700 ಜನರಿಗೆ ಆಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯು ಹೋಂ ಕ್ವಾರಂಟೇನ್‌ನಲ್ಲಿರುವ ಕೋವಿಡ್‍ ಪೀಡಿತರು ಹಾಗೂ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಸಂಬಂಧಿಕರಿಗೆ ಉಚಿತವಾಗಿ ಆಹಾರ ಪೂರೈಸುತ್ತಿದೆ.

ಬ್ರಿಮ್ಸ್ ಕೋವಿಡ್ ಆಸ್ಪತ್ರೆ ಹಾಗೂ ಓಲ್ಡ್ ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಸೋಂಕಿತರ ಆರೈಕೆಯಲ್ಲಿರುವ ಅವರ ಸಂಬಂಧಿಕರು ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿ ನಿತ್ಯ 700 ಜನರಿಗೆ ನಿತ್ಯ ಬೆಳಿಗ್ಗೆ 8ಕ್ಕೆ ಉಪಾಹಾರ, ಮಧ್ಯಾಹ್ನ 1.30 ಹಾಗೂ ಸಂಜೆ 7ಕ್ಕೆ ಊಟ ಸರಬರಾಜು ಮಾಡುತ್ತಿದೆ.

‘ಊಟ–ಉಪಾಹಾರ ಪೂರೈಸಲು ನಮ್ಮ ಸಂಸ್ಥೆಯಿಂದ ಸಹಾಯವಾಣಿ ಆರಂಭಿಸಿದ್ದೇವೆ. ಮೊ.8970973758ಗೆ ಕರೆ ಮಾಡಿ ಬೇಡಿಕೆ ಸಲ್ಲಿಸುವ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿರುವವರ ಮನೆ ಬಾಗಿಲಿಗೇ ಉಪಾಹಾರ ಹಾಗೂ ಆಹಾರ ತಲುಪಿಸುತ್ತಿದ್ದೇನೆ. ಬರುವ ದಿನಗಳಲ್ಲಿ 1,500 ಜನರಿಗೆ ಉಚಿತ ಆಹಾರ ಪೂರೈಸುವ ಉದ್ದೇಶ ಇದೆ’ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

‘ರಂಜಾನ್ ಪ್ರಯುಕ್ತ ಉಪವಾಸ ವ್ರತದಲ್ಲಿರುವವರಿಗೆ ಇಫ್ತಾರ್ ಪ್ಯಾಕೆಟ್ ಸಹ ಕೊಡಲಾಗುತ್ತಿದೆ. ಶೀಘ್ರವೇ ನಗರದಲ್ಲಿ ಇನ್ನೂ ಒಂದೆರಡು ಸ್ಥಳ ಗುರುತಿಸಿ ಅಗತ್ಯ ಇರುವವರಿಗೆ ಆಹಾರ ಪೊಟ್ಟಣ ವಿತರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಉಚಿತ ಆಹಾರ ವಿತರಣೆ ಮುಂದುವರಿಯಲಿದೆ. ಸಂಸ್ಥೆಯ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಹಾರ ಧಾನ್ಯ ಕೊಡುವ ಹಾಗೂ ಇತರ ರೀತಿಯಲ್ಲಿ ನೆರವಾಗುವ ಮೂಲಕ ಕೈಜೋಡಿಸುವ ಭರವಸೆ ನೀಡಿದ್ದಾರೆ. ಕೋವಿಡ್‍ನಿಂದ ಸಂಕಷ್ಟದಲ್ಲಿ ಇರುವವರಿಗೆ ಸಂಘ– ಸಂಸ್ಥೆಗಳು, ದಾನಿಗಳು ಮಾನವೀಯತೆ ದೃಷ್ಟಿಯಿಂದ ಸಹಾಯಹಸ್ತ ಚಾಚಬೇಕು’ ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು