ಬಸವಕಲ್ಯಾಣ: ‘ಅನಿಷ್ಟ ಪದ್ಧತಿಗಳನ್ನು ದೂರ ಮಾಡುವ ಉದ್ದೇಶದಿಂದ ಜನಜಾಗೃತಿ ಕೈಗೊಳ್ಳುವುದಕ್ಕಾಗಿ 45 ವರ್ಷಗಳಿಂದ ಶರಣ ಕಮ್ಮಟ ಆಯೋಜಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

‘ಲಿಂ.ಚನ್ನಬಸವ ಪಟ್ಟದ್ದೇವರು ಉದಾತ್ತ ಧ್ಯೇಯ ಮತ್ತು ದೂರದೃಷ್ಟಿಯಿಂದ ಈ ಕಾರ್ಯಕ್ರಮ ಆರಂಭಿಸಿದ್ದಾರೆ. ಪ್ರಜಾಪ್ರಭುತ್ವದ ತಳಹದಿಯ ಹಾಗೂ ಜಾತಿ ರಹಿತ ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಇರುವ ಬಸವತತ್ವ ದೇಶ, ವಿದೇಶದಲ್ಲೂ ಪ್ರಚಾರವಾಗಲಿ ಎಂದು ಅವರು ಬಯಸಿದ್ದರು. ಸರ್ವರಿಗೂ ಸಮಬಾಳು, ಸರ್ವರದು ಸಮಪಾಲು ಎಂಬಂತೆ ಜನಸಾಮಾನ್ಯರಿಗೂ ಸಾಮಾಜಿಕ ನ್ಯಾಯ ದೊರಕಲಿ, ಪ್ರಗತಿಪರ ಚಿಂತಕರು, ವಿಚಾರವಂತರು, ಸಾಹಿತಿಗಳು, ಮಠಾಧೀಶರು ವಚನಸಾಹಿತ್ಯದ ಮಹತ್ವ ತಿಳಿಸಲಿ ಎಂಬ ಸದುದ್ದೇಶ ಅವರು ಹೊಂದಿದ್ದರು. ಈ ಕಾರ್ಯಕ್ಕಾಗಿ ನಿರ್ಮಿಸುತ್ತಿರುವ ಭವ್ಯವಾದ ಅನುಭವ ಮಂಟಪದ ಕಟ್ಟಡ ಕಾಮಗಾರಿಯೂ ಶೀಘ್ರ ಪೂರ್ಣಗೊಳ್ಳಲಿದೆ’ ಎಂದರು.

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಎರಡು ದಿನ ವಿವಿಧ ಗೋಷ್ಠಿ, ಇತರೆ ಚಟುವಟಿಕೆಗಳು ಜರುಗಲಿವೆ’ ಎಂದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಸರ್ವರ ಸಹಾಯ ಸಹಕಾರದಿಂದ ಇದುವರೆಗಿನ ಶರಣ ಕಮ್ಮಟ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಶರಣತತ್ವದ ಪ್ರಸಾರದ ಎಲ್ಲ ಕಾರ್ಯಗಳಿಗೂ ಎಲ್ಲರೂ ಕೈಜೋಡಿಸಬೇಕು’ ಎಂದು ಕೇಳಿಕೊಂಡರು.

ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ, ಹುಲಸೂರ ಶಿವಾನಂದ ಸ್ವಾಮೀಜಿ, ಗೋರಟಾ ಪ್ರಭುದೇವರು, ಶಿವಾನಂದ ಸ್ವಾಮೀಜಿ, ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಹೊನ್ನಾನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಬಸವರಾಜ ಬುಳ್ಳಾ, ಜೈರಾಜ್ ಖಂಡ್ರೆ, ಶಶಿಕಾಂತ ದುರ್ಗೆ, ಡಾ.ಎಸ್.ಬಿ.ದುರ್ಗೆ, ಗುರುನಾಥ ಗಡ್ಡೆ, ದೀಪಕ ಠಮಕೆ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸಚಿವ ಈಶ್ವರ ಖಂಡ್ರೆ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಶಾಸಕ ಶರಣು ಸಲಗರ ಅವರನ್ನು ನೇಮಿಸಿ ಸನ್ಮಾನಿಸಲಾಯಿತು.

ವಚನ ಕಂಠಪಾಠ ಸ್ಪರ್ಧೆ ಆಯೋಜನೆ | ಎರಡು ರಾಷ್ಟ್ರೀಯ ಪ್ರಶಸ್ತಿಗಳು ಪ್ರದಾನ | ಸಮಿತಿ ಅಧ್ಯಕ್ಷ ಖಂಡ್ರೆ, ಕಾರ್ಯಾಧ್ಯಕ್ಷ ಸಲಗರ

1980ರಿಂದ ಸತತವಾಗಿ ಶರಣ ಕಮ್ಮಟ ನಡೆಯುತ್ತಿದೆ. ಈ ಸಲ ನವೆಂಬರ್ 29 30 ರಂದು ಕಾರ್ಯಕ್ರಮ ಆಯೋಜಿಸಲಾಗಿದ್ದು ಹೆಚ್ಚಿನ ಜನರು ಪಾಲ್ಗೊಳ್ಳಬೇಕು.
ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.