ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿಯ ದೂರದೃಷ್ಟಿ ಎಲ್ಲರಿಗೂ ಮಾದರಿ: ಸಚಿವ ಖೂಬಾ

ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಖೂಬಾ ಹೇಳಿಕೆ
Last Updated 22 ಫೆಬ್ರುವರಿ 2023, 4:49 IST
ಅಕ್ಷರ ಗಾತ್ರ

ಭಾಲ್ಕಿ: ‘ಶಿವಾಜಿ ಮಹಾರಾಜರಲ್ಲಿದ್ದ ದೂರದೃಷ್ಟಿ, ನಾಯಕತ್ವ ಗುಣ, ಸ್ತ್ರೀ ಗೌರವ ಸೇರಿ ಇತರ ಆದರ್ಶಗಳು ಸರ್ವರಿಗೂ ಮಾದರಿ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಪಟ್ಟಣದ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜದ ವತಿಯಿಂದ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾಮಾತೆ ಜೀಜಾಬಾಯಿ ಬಾಲ್ಯ ದಿಂದಲೇ ಶಿವಾಜಿಯಲ್ಲಿ ಸದ್ಗು ಣಗಳನ್ನು ಬಿತ್ತಿ ಶ್ರೇಷ್ಠ ಹಿಂದೂ ಸಾಮ್ರಾಟನನ್ನಾಗಿ ರೂಪಗೊಳಿಸಿದರು ಎಂದು ತಿಳಿಸಿದರು.

ಬಿಹಾರ ರಾಜ್ಯದ ಮಾಜಿ ಶಾಸಕ ಪ್ರೇಮಚಂದ ಪಾಟೀಲ ಮಾತನಾಡಿ,‘ಹಿಂದುತ್ವ ಪ್ರತಿಪಾದಿಸುತ್ತ ದೇಶದ ಅಖಂಡ ಸ್ವಾತಂತ್ರ್ಯಕ್ಕೆ ಮೊಟ್ಟ ಮೊದಲು ಅಡಿಪಾಯ ಹಾಕಿದ್ದು ಶಿವಾಜಿ ಮಹಾರಾಜರು’ ಎಂದರು.

ಮಕ್ಕಳ ತಜ್ಞ ದಿನಕರ್ ಮೋರೆ ಮಾತನಾಡಿ,‘ದೇಶದ ಕುರಿತು ಶಿವಾಜಿಯಲ್ಲಿದ್ದ ಕೃತಜ್ಞತಾ ಭಾವ ಹಿರಿದಾಗಿತ್ತು’ ಎಂದು ಹೇಳಿದರು.

ಮರಾಠ ಸಮಾಜದ ಮುಖಂಡ ಜನಾರ್ಧನ ಬಿರಾದಾರ ಮಾತನಾಡಿ,‘ಶಿವಾಜಿ ಮಹಾರಾಜರು ಮಹಿಳೆಯರಿಗೆ ನೀಡುತ್ತಿದ್ದ ಗೌರವ ಮೆಚ್ಚುವಂತಹದ್ದಾಗಿತ್ತು’ ಎಂದು ತಿಳಿಸಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ಎಸ್ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಅನಿಲ್ ಕುಮಾರ ಸಿಂಧೆ ಹಾಗೂ ದಿಗಂಬರ ಮಹಾರಾಜ ಬೋಳೆಗಾವಂಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಮರಾವ್ ವರವಟ್ಟಿಕರ್, ಜನಾರ್ಧನ ಪಾಟೀಲ, ದಿಗಂಬರ ಮಾನಕಾರಿ, ವೈಜಿನಾಥ ತಗಾರೆ, ದತ್ತು ಕಾಟಕರ, ಪಿ.ಎಸ್.ಬಿರಾದಾರ, ನಾಮದೇವರಾವ್ ಪವಾರ್, ಕಿಶನರಾವ್ ಪಾಟೀಲ, ಹೀರಾಚಂದ, ವಿಜಯಕುಮಾರ ಹಾಗೂ ಸತೀಶಕುಮಾರ ಸೂರ್ಯವಂಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT