ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಡಾ. ಶಿವಕುಮಾರ ಸ್ವಾಮೀಜಿ ತುಲಾಭಾರ

Last Updated 1 ಡಿಸೆಂಬರ್ 2021, 4:24 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಸಿದ್ಧಾರೂಢ ಮಠದ ಚಿದಂಬರಾಶ್ರಮದಲ್ಲಿ ನಡೆದ ಐದು ದಿನಗಳ ಶಿವಕುಮಾರ ಸ್ವಾಮೀಜಿ ಅವರ 77ನೇ ಜಯಂತಿ ಮಹೋತ್ಸವ ಮಂಗಳವಾರ ಸಂಭ್ರಮದ ಮಧ್ಯೆ ತೆರೆ ಕಂಡಿತು.

ಸಮಾರೋಪ ಸಮಾರಂಭದಲ್ಲಿ ಭಕ್ತರು ಶಿವಕುಮಾರ ಸ್ವಾಮೀಜಿ ಅವರಿಗೆ ಸುವರ್ಣ ಕಿರೀಟ ತೊಡಿಸಿದರು. ನಾಣ್ಯಗಳಿಂದ ತುಲಾಭಾರ ಮಾಡಿದರು. ಶ್ರೀಗಂಧದ ಪಾದರಕ್ಷೆಗಳನ್ನೂ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಭಕ್ತರಾದ ಶೋಭಾ ಕಾಳಗಿ, ತಾರಾಬಾಯಿ ಮನಗೂಳಿ, ಸಂಜು ಐಹೊಳೆ, ಶಿವಶರಣ ಸುರಪುರ ಹಾಗೂ ಸಂಗನಗೌಡ ಪಾಟೀಲ ಅವರು ನಾಣ್ಯಗಳಿಂದ ಶ್ರೀಗಳ ತುಲಾಭಾರ ಮಾಡಿದರೆ, ಕರಬಸಪ್ಪ ಪಂಚಾಳ ನೆನಪಿನ ಕಾಣಿಕೆಯಾಗಿ ಶ್ರೀಗಂಧದ ಪಾದರಕ್ಷೆಗಳನ್ನು ನೀಡಿದರು. ವಾಸುದೇವ ದೀಕ್ಷಿತ್ ಅವರು ಶ್ರೀಗಳ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ವಿಶೇಷ ಪೂಜೆಗೈದರು.

ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶೆಟಕಾರ್, ಬಸವರಾಜ ಜಾಬಶೆಟ್ಟಿ, ಮಡಿವಾಳಪ್ಪ ಗಂಗಶೆಟ್ಟಿ, ಉದಯಭಾನು ಹಲವಾಯಿ, ಶಿವಶರಣಪ್ಪ ಸಾವಳಗಿ, ಕರಬಸಪ್ಪ ಮುಸ್ತಾಪುರೆ, ಶರಣಪ್ಪ ತಿರ್ಲಾಪುರೆ, ಪ್ರಭುಶೆಟ್ಟಿ ಮುದ್ದಾ, ಈಶ್ವರ ಗೌಡ ಕಮಡಳ್ಳಿ, ಸುಭಾಷ್ ಉಪ್ಪೆ, ಭಾರತಿಬಾಯಿ ಕಣಜೆ ಮೊದಲಾದವರು ಶಾಲು ಹೊದಿಸಿ ಶ್ರೀಗಳಿಗೆ ಜನ್ಮದಿನದ ಶುಭ ಕೋರಿದರು.

ಸುಖ ಪರಮ ಇಚ್ಛೆ: ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ. ಶಿವಕುಮಾರ ಸ್ವಾಮೀಜಿ ಅವರು, ಸುಖ ಪ್ರತಿಯೊಬ್ಬರ ಪರಮ ಇಚ್ಛೆಯಾಗಿದೆ. ದುಃಖವನ್ನು ಯಾರೂ ಬಯಸುವುದಿಲ್ಲ ಎಂದು ಹೇಳಿದರು.

ಸುಖ ಬೇಕೆಂದರೆ ಆಸೆ ಬಿಡಿ. ನಿತ್ಯ ಸದ್ಗುರುವಿನ ನಾಮಸ್ಮರಣೆ ಮಾಡಿ. ದೊಡ್ಡವರು ನಡೆದ ದಾರಿಯಲ್ಲಿ ನಡೆಯಿರಿ ಎಂದು ಸಲಹೆ ಮಾಡಿದರು.

ದುಃಖ ನಾವು ಮಾಡಿಕೊಂಡಿದ್ದೇವೆ. ನಮ್ಮ ಮೂಲ ಸ್ವರೂಪ ಸದಾ ಆನಂದದಾಯಕವಾಗಿದೆ. ಸುಖದ ಪ್ರಾಪ್ತಿಗೆ ಕಾಮನನ್ನು ಬಿಟ್ಟು ರಾಮನ ಪಾದ ಹಿಡಿಯಿರಿ. ‘ಸಾಕೆನಿಸದ ಸವೆಯದ ಮತ್ತೆ ಬೇಕೆನಿಸದ ಪರಮ ಸುಖವ ತೋರಯ್ಯ’ ಎಂದು ನಿಜಗುಣರು ರಾಜ ಪದವಿ ಬಿಟ್ಟು ಗುರುವಿಗೆ ಶರಣು ಹೋದರು ಎಂದು ಹೇಳಿದರು.

ಪರಮಾತ್ಮ ಎಲ್ಲ ಕಡೆಯೂ ಇದ್ದಾನೆ. ನೋಡುವ ಕಣ್ಣುಗಳು ಬೇಕಷ್ಟೇ. ಶ್ರದ್ಧೆ, ಭಕ್ತಿ ಇಲ್ಲದ ಕಾರಣ ನಮಗೆ ದೇವರು ಕಾಣುತ್ತಿಲ್ಲ ಎಂದರು.

ಕಲಬುರಗಿಯ ಮಾತೆ ಲಕ್ಷ್ಮಿದೇವಿ, ಗಣೇಶಾನಂದ ಮಹಾರಾಜ್, ದಯಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ಸಿದ್ಧೇಶ್ವರಿ, ಮಾತೆ ಸಂಗೀತಾ, ಸತೀಶ ದೇವರು, ವಿನಾಯಕ ದೇವರು, ಷಡಕ್ಷರಿ ದೇವರು, ಡಾ. ಹಾವಗಿರಾವ್ ಮೈಲಾರೆ, ಸಹಜಾನಂದ ಕಂದಗೂಳ್, ಪ್ರಭುಲಿಂಗ ಬೆಣ್ಣೆ, ಅಮರನಾಥ ಕಣಜಿ, ಕ್ರಾಂತಿಕುಮಾರ ಸಿರ್ಸೆ, ಡಾ. ಮೂರ್ತಿ, ಡಾ. ಚಂದ್ರಪ್ಪ ಭತಮುರ್ಗೆ, ಮಾಣಿಕರಾವ್ ಪಂಚಾಳ, ಲಕ್ಷ್ಮಣ ಪೂಜಾರಿ, ಗೋಪಾಲ್ ರೆಡ್ಡಿ ಇದ್ದರು. ವಿನಾಯಕ ದೇವರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT