ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ರಾಜ್ಯಮಟ್ಟದ ಕವಿಗೋಷ್ಠಿ ನಾಳೆ

Last Updated 19 ಮಾರ್ಚ್ 2021, 16:52 IST
ಅಕ್ಷರ ಗಾತ್ರ

ಬೀದರ್: ಮಂದಾರ ಕಲಾವಿದರ ವೇದಿಕೆಯಿಂದ ಡಾ.ಎಂ.ಜಿ.ದೇಶಪಾಂಡೆ ಅವರ 69ನೇ ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 21ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೃಷ್ಣ ರಿಜೆನ್ಸಿ ಸಭಾಂಗಣದಲ್ಲಿ ನಡೆಯಲಿದೆ.

ಉಪ ಪೊಲೀಸ್ ಅಧೀಕ್ಷಕ ಬಸವೇಶ್ವರ ಹೀರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎನ್ ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು. ಎನ್.ಬಿ.ರೆಡ್ಡಿ ಗುರೂಜಿ ಸಾನ್ನಿಧ್ಯ ವಹಿಸುವರು.

ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ.ಸತೀಶಮಾರ ಹೊಸಮನಿ, ಮೈಸೂರಿನ ಕವಿ ಜಯಪ್ಪ ಹೊನ್ನಾಳಿ, ಖ್ಯಾತ ಕವಯಿತ್ರಿ ಕಾವ್ಯಶ್ರೀ ಮಹಾಗಾಂವಕರ್, ರಾಜಾಚರ್ಯ, ಹಾಮಾ ಸತೀಶ, ಜಗನ್ನಾಥ್ ಹೆಬ್ಬಾಳೆ, ಸುರೇಶ್ ಚನಶೆಟ್ಟಿ, ಡಾ.ಸಿ.ಆನಂದರಾವ್, ಡಾ.ಎಂಆರ್ ನಾಗರಾಜರಾವ್, ಸಂಗಮೇಶ್ವರ ಜ್ಯಾಂತೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕವಿಗೋಷ್ಠಿಯಲ್ಲಿ ಮುಂಬೈ, ಬೆಂಗಳೂರು, ಧಾರವಾಡದ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT