ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನದಿಂದ ಗಟ್ಟಿ ಕಾವ್ಯ ರಚನೆ; ಡಾ. ಜಯದೇವಿ

Last Updated 25 ಮಾರ್ಚ್ 2022, 4:22 IST
ಅಕ್ಷರ ಗಾತ್ರ

ಬೀದರ್: ಅಧ್ಯಯನ ಹಾಗೂ ಅನುಭವದಿಂದ ಗಟ್ಟಿ ಕಾವ್ಯಗಳನ್ನು ರಚಿಸಬಹುದು ಎಂದು ಸಾಹಿತಿ ಡಾ. ಜಯದೇವಿ ಗಾಯಕವಾಡ ಹೇಳಿದರು.

ಸಾಹಿತಿ ಎಂ.ಜಿ. ದೇಶಪಾಂಡೆ ಜನ್ಮದಿನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಂದಾರ ಕಲಾವಿದರ ವೇದಿಕೆ ವತಿಯಿಂದ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಕವಿಗೋಷ್ಠಿ ಹಾಗೂ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸುತ್ತಲಿನ ಘಟನೆಗಳನ್ನು ಆಧರಿಸಿ, ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಾವ್ಯ ರಚಿಸಬೇಕು. ಸಾಮಾಜಿಕ ತಲ್ಲಣಗಳನ್ನು ಕೂಡ ಕಾವ್ಯಗಳ ರೂಪದಲ್ಲಿ ಬಿಂಬಿಸಬೇಕು ಎಂದು ತಿಳಿಸಿದರು.

ಸಾಹಿತಿ ಡಾ. ಎಂ.ಜಿ. ದೇಶಪಾಂಡೆ, ಡಾ. ಮಹೇಶ್ವರಿ ಹೆಗಡೆ, ರಜನಿ ಅಶೋಕ ಮಾತನಾಡಿದರು.ಶ್ರೀದೇವಿ ಪಾಟೀಲ, ವಿರೂಪಾಕ್ಷಿ ಎಲೆಗಾರ, ಶಿವಲೀಲಾ ತಗಾರೆ, ಜಯಶ್ರೀ ಚುನಮರಿ, ಗೀತಾಕುಮಾರಿ ದಾವಣರೆಗೆ, ಮಧು ಪಾಂಡೆ ಮಾನ್ವಿ, ಅನುಸೂಯಾ ನಾಗನಳ್ಳಿ, ರೇಣುಕಾ ಎಸ್, ಧರ್ಮಣ್ಣ ಎಚ್. ದಿನ್ನೆ, ಮಹಾನಂದಾ ಮಡಕಿ, ಸುನಿತಾ ಕೂಡ್ಲಿಕರ್, ಮೋಹನ್ ಪಾಟೀಲ, ಶಾಂತಾ ಪಸ್ತಾಪುರ, ಪುಣ್ಯವತಿ ವಿಸಾಜಿ, ಸಂಗೀತಾ ಸ್ವರಚಿತ ಕವನ ವಾಚಿಸಿದರು.150ಕ್ಕೂ ಹೆಚ್ಚು ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿ.ಆನಂದರಾವ್, ರಾಮಕೃಷ್ಣ ಸಾಳೆ, ಅಶೋಕ ಬೂದಿಹಾಳ ಇದ್ದರು. ದೀಪಕ್ ಥಮಕೆ ನಿರೂಪಿಸಿದರು. ಎಸ್.ಬಿ. ಕುಚಬಾಳ, ಶ್ರೇಯಾ ಸ್ವಾಗತಿಸಿದರು. ಮಹಾನಂದಾ ಮಡಕಿ, ಶಿಲ್ಪಾ ಮಜಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT