ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಉದ್ಘಾಟನಾ ಭಾಗ್ಯ ಕಾಣದ ಪುರಸಭೆ ಮಳಿಗೆಗಳು

₹32.5 ಲಕ್ಷ ಅನುದಾನದಲ್ಲಿ ಕುಡಂಬಲ್‌ ರಸ್ತೆ ಪಕ್ಕ ನಿರ್ಮಾಣ
Published 15 ಜುಲೈ 2023, 6:19 IST
Last Updated 15 ಜುಲೈ 2023, 6:19 IST
ಅಕ್ಷರ ಗಾತ್ರ

ಚಿಟಗುಪ್ಪ: ಇಲ್ಲಿಯ ಪುರಸಭೆ ಆವರಣದಲ್ಲಿ 2016-17 ರಲ್ಲಿ ನಿರ್ಮಿಸಲಾದ ಒಂಬತ್ತು ವಾಣಿಜ್ಯ ಮಳಿಗೆಗಳು ಇಂದಿಗೂ ಉದ್ಘಾಟನಾ ಭಾಗ್ಯ ಕಂಡಿಲ್ಲ!.

ನಗರೋತ್ಥಾನ-3 ಯೋಜನೆ ಅಡಿ ಬೀದರ್‌ನ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಮಳಿಗೆಗಳನ್ನು ನಿರ್ಮಿಸಲಾಗಿದೆ.

‘₹32.5 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಮಳಿಗೆಗಳು ಸದ್ಯ ಪಾಳು ಬಿದ್ದಂತಾಗಿವೆ. ಇದರಿಂದ ಪುರಸಭೆಗೂ ಲಾಭ ಇಲ್ಲ. ನಾಗರಿಕರಿಗೂ ಉಪಯೋಗವಿಲ್ಲ. ಸರ್ಕಾರದ ಹಣ ಪೋಲಾದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಮಳಿಗೆಗಳನ್ನು ಉದ್ಘಾಟಿಸಿ ವರ್ತಕರಿಗೆ ಬಾಡಿಗೆಗೆ ಕೊಡಬೇಕು. ಇದರಿಂದ ಪುರಸಭೆಗೆ ಆದಾಯ ಹೆಚ್ಚುತ್ತದೆ. ಬೀದಿ ವ್ಯಾಪಾರಿಗಳು ಸಣ್ಣ ಅಂಗಡಿ ನಡೆಸುವವರಿಗೆ ಉದ್ಯೋಗ ಕೈಗೊಳ್ಳಲು ಅವಕಾಶ ನೀಡಿದಂತಾಗುತ್ತದೆ’ ಎಂದು ವರ್ತಕರಾದ ರವಿ, ಶಂಕರ್ ಹಾಗೂ ಇತರರು ಆಗ್ರಹಿಸಿದ್ದಾರೆ.

ಕುಡಂಬಲ್‌ ರಸ್ತೆ ಪಕ್ಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಬಾಡಿಗೆಗೆ ನೀಡುವುದರಿಂದ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುತ್ತದೆ. ಈ ಪ್ರದೇಶ ಮಾರುಕಟ್ಟೆ ಪ್ರದೇಶವಾಗಿ ಬೆಳೆಯುತ್ತದೆ ಎಂದು ಸ್ಥಳೀಯರು ತಿಳಿಸಿದರು.

‘ಪುರಸಭೆಯ ಹಳೆ ಕಟ್ಟಡವನ್ನು ತಹಶೀಲ್ದಾರ್ ಕಚೇರಿಗೆ ಹಸ್ತಾಂತರಿಸಿದ ನಂತರ ಪುರಸಭೆಯ ಹಳೆ ಸಾಮಗ್ರಿ ಸಂಗ್ರಹಿಸಿಡಲು ಸ್ಥಳಾವಕಾಶ ಇಲ್ಲದ ಕಾರಣ 9 ಮಳಿಗೆಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗಿದೆ. ಆದ್ದರಿಂದ ಇದುವರೆಗೂ ಉದ್ಘಾಟಿಸಿಲ್ಲ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ಹುಸಾಮೋದ್ದಿನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT