ಮಂಗಳವಾರ, ಮಾರ್ಚ್ 2, 2021
19 °C

ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಇಲ್ಲಿಯ ಪುರಸಭೆ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ತಕ್ಷಣ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ ರಾಘವೇಂದ್ರ ರೇವಣಸಿದ್ದಪ್ಪ ಅವರು ಕಟ್ಟಡದ ಚಾವಣಿ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಂಗಳವಾರ ಸಂಭವಿಸಿದೆ.

‘ಎರಡು ತಿಂಗಳಿಂದ ಪೌರಕಾರ್ಮಿಕರ ಸಂಬಳ ಆಗದೇ ಇರುವುದರಿಂದ ಕುಟುಂಬದ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ’ ಎಂದು ರಾಘವೇಂದ್ರ ತಿಳಿಸಿದ್ದಾರೆ.

‘ಧ್ವಜಾರೋಹಣ ನೆರವೇರಿಸಿದ ತಕ್ಷಣ ಎಲ್ಲರೂ ನಿಲ್ಲಿ ಎಂಬ ಜೋರಾದ ಶಬ್ದ ಕಟ್ಟಡದ ಮೇಲಿ ನಿಂದ ಕೇಳಿಬಂತು. ಆಗ ಎಲ್ಲರೂ ಮೇಲೆ ನೋಡಿದೆವು. ರಾಘವೇಂದ್ರ ಅವರು ಕೊರಳಿಗೆ ಹಗ್ಗದ ಕುಣಿಕೆ ಹಾಕಿಕೊಂಡು ಕಟ್ಟಡದಿಂದ ಕೆಳಗೆ ಜಿಗಿಯಲು ಯತ್ನಿಸಿದರು. ತಕ್ಷಣ ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಚಾವಣಿ ಮೇಲೆ ಹೋಗಿ ಅವರನ್ನು ಕಾಪಾಡಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಮುಖ್ಯಾಧಿಕಾರಿ ಶ್ರೀಪಾದ್ ರಾಜಪುರೋಹಿತ, ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು