ಶನಿವಾರ, ಮೇ 28, 2022
27 °C

ಬೀದರ್: ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ 24 ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ನ. 24 ರಿಂದ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಎಸ್.ಎಸ್.ಎ. ಸಭಾಂಗಣದಲ್ಲಿ ಆರಂಭವಾಗಲಿದೆ.

ನ. 24 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 1 ರಿಂದ 29 ರ ವರೆಗಿನ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಮತ್ತು ಹಿರಿಯ ಮುಖ್ಯಶಿಕ್ಷಕರು, ಬೆಳಿಗ್ಗೆ 11.30 ರಿಂದ ಕ್ರಮ ಸಂಖ್ಯೆ 1 ರಿಂದ 2 ರ ವರೆಗಿನ ಪಾಥಮಿಕ ಶಾಲಾ ವಿಶೇಷ ಶಿಕ್ಷಕರು, ಮಧ್ಯಾಹ್ನ 12 ರಿಂದ ಕ್ರಮ ಸಂಖ್ಯೆ 1 ರಿಂದ 85 ರ ವರೆಗಿನ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಕೌನ್ಸೆಲಿಂಗ್ ಜರುಗಲಿದೆ.

ನ. 25 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 1 ರಿಂದ 100 ರ ವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು, ನ. 26 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 101 ರಿಂದ 250 ರವರೆಗಿನ ಪಾಥಮಿಕ ಶಾಲಾ ಶಿಕ್ಷಕರು, ನ. 29 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 251 ರಿಂದ 500 ರ ವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು, ನ. 30 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 501 ರಿಂದ 800 ರ ವರೆಗಿನ ಪಾಥಮಿಕ ಶಾಲಾ ಶಿಕ್ಷಕರು ಹಾಗೂ ಡಿಸೆಂಬರ್ 1 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 801 ರಿಂದ 1,187ರ ವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ನಡೆಯಲಿದೆ.

ನ. 24 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 1 ರಿಂದ 36 ರವರೆಗಿನ ಪ್ರೌಢಶಾಲಾ ದೈಹಿಕ ಶಿಕ್ಷಕರು, ಮಧ್ಯಾಹ್ನ 12 ರಿಂದ ಕ್ರಮ ಸಂಖ್ಯೆ 1 ರಿಂದ 21 ರವರೆಗಿನ ಪ್ರೌಢಶಾಲಾ ವಿಶೇಷ ಶಿಕ್ಷಕರ ಕೌನ್ಸೆಲಿಂಗ್ ಜರುಗಲಿದೆ.

ನ. 25 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 1 ರಿಂದ 150 ರ ವರೆಗಿನ ಪ್ರೌಢಶಾಲಾ ಶಿಕ್ಷಕರು, ನ. 26 ರಂದು ಬೆಳಿಗ್ಗೆ 10 ರಿಂದ ಕ್ರಮ ಸಂಖ್ಯೆ 151 ರಿಂದ 311 ರವರೆಗಿನ ಪ್ರೌಢಶಾಲಾ ಸಹ ಶಿಕ್ಷಕರ ಕೌನ್ಸೆಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು