ಬುಧವಾರ, ಜನವರಿ 19, 2022
18 °C

ಡಿಸೆಂಬರ್‌ 31ಕ್ಕೆ ದೂರದರ್ಶನ ಮರು ಪ್ರಸಾರ ಕೇಂದ್ರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ಜನವಾಡ ರಸ್ತೆಯಲ್ಲಿರುವ ದೂರದರ್ಶನ ಮರು ಪ್ರಸಾರ ಕೇಂದ್ರವು ಇದೇ 31ರಂದು ತನ್ನ ಪ್ರಸರಣ ಸಂಪೂರ್ಣ ಸ್ಥಗಿತಗೊಳಿಸಲಿದೆ ಎಂದು ಪ್ರಸಾರ ಭಾರತಿ ಮಂಡಳಿಯ ಉಪ ನಿರ್ದೇಶಕ ಜೆ.ಬಿ.ಚರಕಪಳ್ಳಿ ತಿಳಿಸಿದ್ದಾರೆ.

ಡಿಜಿಟಲೀಕರಣದ ಭಾಗವಾಗಿ ಲೋ ಪವರ್‌ ಟ್ರಾನ್ಸ್‌ಮೀಟರ್‌- ಎಲ್‌ಪಿಟಿಗಳನ್ನು ಮುಚ್ಚುವ ಪ್ರಕ್ರಿಯೆ ನಾಲ್ಕು ವರ್ಷಗಳಿಂದ ನಡೆದಿದೆ. ದೂರದರ್ಶನವು ಡಿಟಿಎಚ್‌ ಸೇವೆ ಆರಂಭಿಸಿದೆ. ಹೈಪವರ್‌ ಟ್ರಾನ್ಸ್‌ಮೀಟರ್‌ಗಳೂ ಬಲು ದೂರದವರೆಗೆ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಮರು ಪ್ರಸಾರ ಕೇಂದ್ರಗಳು ತಮ್ಮ ಮಹತ್ವ ಕಳೆದುಕೊಂಡಿವೆ.

ಈಗ ಎಂಟೆನಾ ಅಳವಡಿಸಿ ಟಿ.ವಿ. ನೋಡುವವರೂ ಇಲ್ಲ. ಆದ್ದರಿಂದ ಸಾಂಪ್ರದಾಯಿಕ ಅನ್‌ಲಾಗ್‌ ಮರುಪ್ರಸಾರ ಕೇಂದ್ರವನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದರಿಂದ ದೂರದರ್ಶನ ಕಾರ್ಯಕ್ರಮಗಳ ಪ್ರಸಾರದಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು