ಬುಧವಾರ, ಜನವರಿ 29, 2020
°C

ಗೂಡ್ಸ್‌ ಟೆಂಪೊ ಮಗುಚಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಲಸೂರು: ತಾಲ್ಲೂಕಿನ ಹಾಲಹಳ್ಳಿ ಸಮೀಪ ಗುರುವಾರ ಬೆಳಿಗ್ಗೆ ಗೂಡ್ಸ್‌ ಟೆಂಪೊ ಮಗುಚಿ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಲಾತೂರ್ ಜಿಲ್ಲೆಯ ದೇವಣಿ ತಾಲ್ಲೂಕಿನ ಕೌಠಾಳ ಗ್ರಾಮದ ಮಹಾದೇವ ವಸಂತ ನೀಡಬನೆ(12) ಮೃತ ವ್ಯಕ್ತಿ. ಘಟನೆಯಲ್ಲಿ ಕೌಠಾಳದ 12 ಜನರು ಗಾಯಗೊಂಡಿದ್ದಾರೆ.

ಲಾತೂರ್ ಜಿಲ್ಲೆಯ ದೇವಣಿಯಿಂದ ಘೋರವಾಡಿ ಗ್ರಾಮ ದೇವತೆ ದರ್ಶನಕ್ಕೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಹುಲಸೂರು ಪಿಎಸ್‌ಐ ಗೌತಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟು ಗಾಯಗೊಂಡವರನ್ನು ಆಸ್ಪತ್ರೆಗೆ ಕಳಿಸಿಕೊಟ್ಟರು.

ಪ್ರತಿಕ್ರಿಯಿಸಿ (+)