ಬುಧವಾರ, ಮಾರ್ಚ್ 29, 2023
28 °C

ನುಡಿ, ನಡೆಗೆ ಪ್ರಾಮುಖ್ಯ ನೀಡಿದ ಬಸವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬಸವಣ್ಣನವರು ನುಡಿ, ನಡೆಗೆ ಪ್ರಾಮುಖ್ಯ ನೀಡಿದ್ದರು ಎಂದು ಲಿಂಗಾಯತ ಮಹಾಮಠದ ಪ್ರಭುದೇವರು ನುಡಿದರು.

ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಬೀದರ್ ತಾಲ್ಲೂಕಿನ ರಾಜಗೀರಾದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಂಭ್ರಮ ಮತ್ತು ಗುರುವಚನ ಪ್ರವಚನ ಅಭಿಯಾನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನದೊಳಗೊಂದು, ಮಾತಿನಲ್ಲಿ ಮತ್ತೊಂದು, ಕ್ರಿಯೆಯಲ್ಲಿ ಇನ್ನೊಂದು ಆದರೆ ದೇವರು ಮೆಚ್ಚಲಾರ ಎಂದು ಅವರು ಹೇಳಿದ್ದರು ಎಂದು ತಿಳಿಸಿದರು.

ನುಡಿದ ನುಡಿಯನ್ನು ಪೂರೈಸುವುದು ಪ್ರಾಣಕ್ಕಿಂತ ಪ್ರಿಯವಾಗಬೇಕು ಎಂದು ಹೇಳಿದರು.

ಶಾಮರಾವ್ ಕುಲಕರ್ಣಿ ಉದ್ಘಾಟಿಸಿದರು. ಲೋಕೇಶ ವರವಟ್ಟಿ ಮಾತನಾಡಿದರು. ಹಣಮಂತರಾವ್ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಜಗಣ್ಣ ದೇವರು ಸಮ್ಮುಖ ವಹಿಸಿದ್ದರು. ನಾಗಶೆಟ್ಟಿ ಇಪ್ಪಳ್ಳಿ ಇದ್ದರು. ಆಕಾಶ ರೆಡ್ಡಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು