ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಅವಶ್ಯಕತೆಗಳಿಗೆ ಸ್ಪಂದಿಸುವುದೇ ಸಹಕಾರದ ಗುಟ್ಟು

Last Updated 16 ಫೆಬ್ರುವರಿ 2021, 13:44 IST
ಅಕ್ಷರ ಗಾತ್ರ

ಬೀದರ್‌: ‘ಸ್ಥಳೀಯರ ಅವಶ್ಯಕತೆಗಳಿಗೆ ಪೂರಕವಾಗಿ ಸ್ಪಂದಿಸುವುದೇ ಸಹಕಾರ ಸಂಘಗಳ ಯಶಸ್ಸಿನ ಗುಟ್ಟಾಗಿದೆ’ ಎಂದು ರಾಜ್ಯ ಮಹಿಳಾ ಸಹಕಾರಿ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹೇಳಿದರು.

ಡಾ ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ನಬಾರ್ಡ್ ವತಿಯಿಂದ ಬಾಗಲಕೋಟೆ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗಾಗಿ ಆಯೋಜಸಿದ್ದ ಮೂರು ದಿನಗಳ ತರಬೇತಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಹಕಾರ ಸಂಘಗಳ ಮೂಲಕ ಜನರು ಆರ್ಥಿಕ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದು ಸಮುದಾಯದಲ್ಲಿ ಸಹಕಾರ ಮನೋಭಾವನೆ, ಒಗ್ಗಟ್ಟು, ಸಹಬಾಳ್ವೆಯನ್ನು ಕಲಿಸುತ್ತದೆ’ ಎಂದು ತಿಳಿಸಿದರು.

‘ಸರ್ವರಿಗೂ ಸಮ ಪಾಲು ಸಮ ಬಾಳು ತತ್ವದಡಿಯಲ್ಲಿ ಜಾತಿಮತ ಭೇದವಿಲ್ಲದೆ ಕೂಡಿ ಬಾಳುವ ಹಾಗೂ ಭ್ರಾತೃತ್ವ ಭಾವನೆಯನ್ನು ಬೆಳೆಸುವ ಸಹಕಾರ ರಂಗ ಸಮುದಾಯಕ್ಕೆ ನೆರವಾಗಿದೆ’ ನಾಯಕರಾಗಿ ಬೆಳೆಯಲು ಸಹ ಅವಕಾಶಗಳಿವೆ’ ಎಂದರು.

ಬಾಗಲಕೋಟೆ ಕಂದಗಲ್ ಪಿಕೆಪಿಎಸ ಅಧ್ಯಕ್ಷ ಪಂಪಣ್ಣ ಅನುಭವ ಹಂಚಿಕೊಂಡರು. ಸಹಾರ್ದ ನಿರ್ದೇಶಕ ಬಿ. ಸುಬ್ರಹ್ಮಣ್ಯ ಪ್ರಭು ಅವರು ತರಬೇತಿ ಉದ್ದೇಶಗಳನ್ನು ವಿವರಿಸಿದರು.

ಸಹಾರ್ದ ಸಂಸ್ಥೆಯ ಉಪನ್ಯಾಸಕ ಎಸ್.ಜಿ.ಪಾಟೀಲ ನಿರೂಪಿಸಿದರು. ಮಹಾಲಿಂಗ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT