ಗುರುವಾರ , ಜುಲೈ 29, 2021
21 °C

ಆರು ಮರಿಗಳಿಗೆ ಜನ್ಮ ನೀಡಿದ ಮೇಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಸಿಂಗಾರಬಾಗ್‌ನ ಅಬ್ದುಲ್ ವಾಹಬ್ ಅವರ ಮೇಕೆ ಶುಕ್ರವಾರ ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣವಾಗಿದೆ.

ಆರು ಮರಿಗಳಲ್ಲಿ ಐದು ಗಂಡು ಹಾಗೂ ಒಂದು ಹೆಣ್ಣು ಇದೆ. ಎರಡು ಗಂಡು ಮರಿಗಳು ಮೃತಪಟ್ಟಿವೆ.
ನಗರದ ಕೋಟೆ ಸಮೀಪ ಇರುವ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ನಲ್ಲಿ ಮೇಕೆ ಹೆರಿಗೆ ಆಗಿದೆ.

ಏಕಕಾಲಕ್ಕೆ ಆರು ಮರಿಗಳನ್ನು ನೀಡಿದ್ದಕ್ಕೆ ಮೇಕೆ ಮಾಲೀಕ ಅಬ್ದುಲ್ ವಾಹಬ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಮೇಕೆ ಆರು ಮರಿಗಳನ್ನು ನೀಡಿರುವುದು ಖುಷಿ ತಂದಿದೆ. ಎಲ್ಲವೂ ಜೀವಂತವಾಗಿದ್ದರೆ ಖುಷಿ ಇಮ್ಮಡಿಗೊಳ್ಳುತ್ತಿತ್ತು. ಆದರೂ, ನಾಲ್ಕು ಮರಿಗಳು ಜೀವಂತ ಉಳಿದಿರುವುದು ಸಮಾಧಾನ ಉಂಟು ಮಾಡಿದೆ’ ಎಂದು ವಾಹಬ್ ತಿಳಿಸಿದರು.

‘ಮೇಕೆ ಮೊದಲ, ಎರಡನೇ ಹಾಗೂ ಮೂರನೇ ಹೆರಿಕೆಯಲ್ಲಿ ಕ್ರಮವಾಗಿ 1, 2 ಮತ್ತು 3 ಮರಿಗಳನ್ನು ನೀಡಿತ್ತು. ನಾಲ್ಕನೇ ಹೆರಿಗೆಯಲ್ಲಿ ಒಂದು ಮರಿ ಕೊಟ್ಟಿತ್ತು. ಇದೀಗ ಐದನೇ ಹೆರಿಗೆಯಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ’ ಎಂದು ಹೇಳಿದರು.

‘ಮೇಕೆಗಳು ಸಾಮಾನ್ಯವಾಗಿ ಒಂದು ಮರಿ ಕೊಡುತ್ತವೆ. ಕೆಲವೊಮ್ಮೆ 2 ಮರಿಗಳಿಗೆ ಜನ್ಮ ನೀಡುತ್ತವೆ. ಹತ್ತು ವರ್ಷಗಳ ಅವಧಿಯಲ್ಲಿ ನಾಲ್ಕು ಮರಿ ಕೊಟ್ಟಿದ್ದನ್ನು ಕೇಳಿದ್ದೇನೆ. ಇದೀಗ 6 ಮರಿ ನೀಡಿರುವುದು ಅಪರೂಪವಾಗಿದೆ’ ಎಂದು ಪಾಲಿ ಕ್ಲಿನಿಕ್‌ನ ಡಾ. ಬಸವರಾಜ ನಿಟ್ಟೂರೆ ತಿಳಿಸಿದರು.

‘ಬೆಳವಣಿಗೆ ಸರಿಯಾಗಿ ಆಗದ ಕಾರಣ ಎರಡು ಗಂಡು ಮರಿಗಳು ಗರ್ಭದಲ್ಲೇ ಮೃತಪಟ್ಟಿವೆ. ಮೂರು ಗಂಡು ಹಾಗೂ ಒಂದು ಹೆಣ್ಣು ಸೇರಿ ನಾಲ್ಕು ಮರಿಗಳು ಆರೋಗ್ಯವಾಗಿವೆ’ ಎಂದು ಹೇಳಿದರು.

ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಿಲ್ಲರ್ಗಿ, ಜಹೀರಾಬಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು