ಬುಧವಾರ, ಜೂನ್ 23, 2021
25 °C
ಅಧಿಕಾರ ಸ್ವೀಕರಿಸಿದ ತಹಶೀಲ್ದಾರ್ ಸಾವಿತ್ರಿ ಸಲಗರ

ಬಸವಕಲ್ಯಾಣ: ಪತಿ ಶಾಸಕ, ಪತ್ನಿ ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಶಾಸಕ ಶರಣು ಸಲಗರ ಅವರ ಪತ್ನಿ ಸಾವಿತ್ರಿ ಸಲಗರ ಇಲ್ಲಿನ ತಹಶೀಲ್ದಾರ್ ಆಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಸಾವಿತ್ರಿ ಅವರು ಎರಡು ವರ್ಷಗಳಿಂದ ಇಲ್ಲಿಯೇ ತಹಶೀಲ್ದಾರ್ ಆಗಿದ್ದರು. ಉಪಚುನಾವಣೆ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಶರಣು ಅವರು ಗೆದ್ದು ಶಾಸಕರಾದ ನಂತರ ವಾರದ ಒಳಗಾಗಿ ಮತ್ತೆ ಅವರು ಈ ಸ್ಥಾನಕ್ಕೆ ಮರಳಿದ್ದಾರೆ.

‘ಇಲ್ಲಿನ ಸಮಸ್ಯೆ ಬಗ್ಗೆ ಸಾವಿತ್ರಿ ಅವರಿಗೆ ಪೂರ್ಣ ಅರಿವಿದೆ’ ಎಂದು ಶರಣು ಸಲಗರ ಹೇಳಿದರು.

‘ಪತಿ ಶಾಸಕರಾಗಿ ಅವರ ಕೆಲಸ ಅವರು ಮಾಡುತ್ತಾರೆ. ನನ್ನ ಕಾರ್ಯವನ್ನು ನಾನು ನಿರ್ವಹಿಸುತ್ತೇನೆ’ ಎಂದು ಸಾವಿತ್ರಿ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.