ಸೋಮವಾರ, ಜೂನ್ 14, 2021
21 °C

ಕೋಹಿರ್- ಬೀದರ್ ರೈಲು ಮಾರ್ಗ ವಿದ್ಯುದ್ದೀಕರಣ: ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋಹಿರ್‌ನಿಂದ ಬೀದರ್‌ ವರೆಗಿನ ರೈಲು ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ವಿಕಾರಾಬಾದ್‍ನಿಂದ ಪರಳಿ ವೈಜಿನಾಥವರೆಗೆ 269 ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣಕ್ಕೆ ₹262.12 ಕೋಟಿ ಮಂಜೂರಾಗಿದೆ. ಮೊದಲ ಕಂತಾಗಿ ₹90 ಕೋಟಿ ಬಿಡುಗಡೆಯೂ ಆಗಿದೆ ಎಂದು ಹೇಳಿದ್ದಾರೆ.

ವಿಕಾರಾಬಾದ್‍ನಿಂದ ಕೋಹಿರ್‌ ವರೆಗಿನ ರೈಲು ಮಾರ್ಗ ವಿದ್ಯುದ್ದೀಕರ ಣದ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಪ್ರಾಯೋಗಿಕ ಕಾರ್ಯಾಚರಣೆ ಕೂಡ ನಡೆದಿದೆ ಎಂದು ತಿಳಿಸಿದ್ದಾರೆ.

ಕೋಹಿರ್‌ನಿಂದ ಬೀದರ್‌ವರೆಗಿನ ಎರಡನೇ ಹಂತದ ಕಾಮಗಾರಿ ಮುಕ್ತಾ ಯದ ನಂತರ ಪ್ರಾಯೋಗಿಕ ಕಾರ್ಯಾ ಚರಣೆ ನಡೆಯಲಿದೆ. ಬಳಿಕ ಹಂತ ಹಂತವಾಗಿ ಮುಂದಿನ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಬರುವ ಕೆಲವೇ ತಿಂಗಳಲ್ಲಿ ವಿಕಾರಾಬಾದ್‍ನಿಂದ ಜಹೀರಾಬಾದ್- ಬೀದರ್- ಖಾನಾಪುರ, ಭಾಲ್ಕಿ- ಕಮಲನಗರ- ಉದಗಿರ- ಲಾತೂರ್ ರಸ್ತೆ- ಪಣಗಾಂವ ಮಾರ್ಗವಾಗಿ ಪರಳಿ ವೈಜಿನಾಥವರೆಗೆ ವಿದ್ಯುತ್ ಚಾಲಿತ ರೈಲು ಓಡಲಿದೆ. ಇದು, ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಮುಂದೆಯೂ ಈ ರೀತಿಯ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2014 ರಿಂದ ರೈಲ್ವೆ ಇಲಾಖೆಯಿಂದ ಬೀದರ್ ಜಿಲ್ಲೆಗೆ ಅನೇಕ ಕೊಡುಗೆಗಳು ಸಿಕ್ಕಿವೆ. ಬೀದರ್-ಕಲಬುರ್ಗಿ, ಬೆಂಗಳೂರು, ಮುಂಬೈ, ತಿರುಪತಿ, ಶಿರಡಿ, ಪಂಢರಾಪುರ, ಕೋಲ್ಹಾಪುರ, ಮಚಲಿಪಟ್ನಂ ಸೇರಿ ಅನೇಕ ಕಡೆಗಳಲ್ಲಿ ರೈಲು ಸೇವೆ ಆರಂಭಿಸಲಾಗಿದೆ. ರೈಲು ನಿಲ್ದಾಣಗಳ ಸೌಂದರ್ಯೀಕರಣ, ಶುಚಿತ್ವ, ಮೂಲಸೌಕರ್ಯಕ್ಕೆ ಒತ್ತು ಕೊಟ್ಟು ಜನರಿಗೆ ಅನುಕೂಲ ಮಾಡಿ ಕೊಡಲಾಗಿದೆ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು