ಹುಮನಾಬಾದ್: ಸೋಮವಾರ ನಸುಕಿನ ಜಾವ ಪಟ್ಟಣದ ಒಟ್ಟು ಐದು ವಿವಿಧ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.

ಈ ಹಿನ್ನೆಲೆ ಹುಮನಾಬಾದ್ ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್‍ಐ ಮಂಜನಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಪಟ್ಟಣದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.

ಪಟ್ಟಣದ ಕಲ್ಲೂರ ರಸ್ತೆಯಲ್ಲಿರುವ ಪತಜಂಜಲಿ ಕೇಂದ್ರ, ಎಸ್.ಎಸ್. ಕಂಪ್ಯೂಟರ್ ಕೇಂದ್ರ, ತೆಂಗಿನ ಅಂಗಡಿ ಸೇರಿದಂತೆ ಒಟ್ಟು 5 ಅಂಗಡಿಗಳ ಬಾಗಿಲು ಮುರಿದಿದ್ದಾರೆ. ಆದರೆ ಅಂಗಡಿಗಳಲ್ಲಿನ ಯಾವುದೇ ಬೆಲೆ ಬಾಳುವ ವಸ್ತುಗಳ ಕಳವು ಆಗಿಲ್ಲ ಎಂದು ಅಂಗಡಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್‍ಐ ಮಂಜನಗೌಡ ಪಾಟೀಲ್, ಸಿಬ್ಬಂದಿಗಳಾದ ಮಲ್ಲು ಮಳ್ಳಿ, ಬಾಲಾಜಿ, ಆಕಾಶ ಸಿಂಧೆ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.