ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ್ ಅದಾಲತ್: ಒಂದಾದ 3 ಜೋಡಿ

Published 10 ಡಿಸೆಂಬರ್ 2023, 15:39 IST
Last Updated 10 ಡಿಸೆಂಬರ್ 2023, 15:39 IST
ಅಕ್ಷರ ಗಾತ್ರ

ಸುರಪುರ: ವಿರಸ ಉಂಟಾಗಿ ಕಳೆದ ಕೆಲ ವರ್ಷಗಳಿಂದ ದೂರವಾಗಿದ್ದ 3 ಜೋಡಿಗಳು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.

ಸಿವಿಲ್ ನ್ಯಾಯಾಲಯದಲ್ಲಿ 1, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 2 ಜೋಡಿಗಳ ಪ್ರತ್ಯೇಕ ಪ್ರಕರಣಗಳು ಇತ್ಯರ್ಥಗೊಂಡವು.

ಸುರಪುರ ಸಾರಿಗೆ ಘಟಕದಲ್ಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗಸುಗೂರು ತಾಲ್ಲೂಕಿನ ಪಲಗಲದಿನ್ನಿ ಗ್ರಾಮದ ಅಮರೇಶ ತಮ್ಮ ಗ್ರಾಮದ ಸವಿತಾ ಅವರೊಂದಿಗೆ 2007ರಲ್ಲಿ ಮದುವೆಯಾಗಿದ್ದರು. ವಿರಸದಿಂದಾಗಿ ದೂರವಾಗಿದ್ದರು. 2019ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಮಧ್ಯಸ್ಥಿಕೆ ವಕೀಲರು ರಾಜಿ ಸಂಧಾನ ನಡೆಸಿದಾಗ ಪರಸ್ಪರ ಒಪ್ಪಿಕೊಂಡು ಒಂದಾಗಿ ಹೋಗುವುದಾಗಿ ತಿಳಿಸಿದರು. ನ್ಯಾಯಾಧೀಶ ಕೆ. ಮಾರುತಿ ಸಮ್ಮುಖದಲ್ಲಿ ದಂಪತಿ ಹಾರ ಬದಲಿಸಿಕೊಂಡರು. ಅರ್ಜಿದಾರರ ಪರವಾಗಿ ಜ್ಯೋತಿ ನಾಯಕ, ಪ್ರತಿವಾದಿ ಪರವಾಗಿ ರಮಾನಂದ ಕವಲಿ ವಾದ ಮಂಡಿಸಿದ್ದರು.

ಸುರಪುರದಲ್ಲಿ ಖಾಸಗಿ ಕೆಲಸ ಮಾಡಿಕೊಂಡಿದ್ದ ಯಡ್ರಾಮಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಪರಮೇಶನೊಂದಿಗೆ ಜೇವರ್ಗಿ ತಾಲ್ಲೂಕಿನ ಜಮಖಂಡಿ ಗ್ರಾಮದ ರಾಯಮ್ಮ ಜತೆ ವಿವಾಹವಾಗಿತ್ತು. 2 ಮಕ್ಕಳಿದ್ದು ಕಳೆದ 8 ವರ್ಷಗಳಿಂದ ಬೇರೆಯಾಗಿದ್ದರು. ಅದೇ ರೀತಿ ಸುರಪುರ ತಾಲ್ಲೂಕಿನ ಹದನೂರ ಗ್ರಾಮದ ಮಹಾಲಕ್ಷ್ಮೀ ಜತೆ ದೇವಾಪುರ ಗ್ರಾಮದ ಯಮನಪ್ಪನೊಂದಿಗೆ ಮದುವೆ ಆಗಿತ್ತು. 7 ವರ್ಷಗಳಿಂದ ದೂರವಾಗಿದ್ದರು. ಎರಡು ಪ್ರಕರಣಗಳು ಹಿರಿಯ ಸಿವಿಲ್ ನ್ಯಾಯಾಲದಲ್ಲಿದ್ದವು.

ಮಧ್ಯಸ್ಥಿಕೆ ವಕೀಲರಿಂದ ರಾಜಿ ಸಂಧಾನ ನಡೆಸಿದಾಗ ಎರಡು ಪ್ರಕರಣಗಳ ದಂಪತಿಗಳು ಒಂದಾಗಿ ಹೋಗುವುದಾಗಿ ಒಪ್ಪಿಗೆ ಸೂಚಿಸಿದರು. ಹಿರಿಯ ಸಿವಿಲ್ ನ್ಯಾಯಾದೀಶ ಮಲ್ಲಿಕಾರ್ಜುನ ಕಮತಗಿ ಸಮ್ಮುಖದಲ್ಲಿ ದಂಪತಿಗಳು ಹಾರ ಬದಲಾಯಿಸಿಕೊಂಡರು. ವಾದಿ ಪರವಾಗಿ ಎಚ್.ಕಟ್ಟಿಮನಿ, ಪ್ರತಿವಾದಿ ಪರವಾಗಿ ಎಸ್.ಟಿ.ಬಡಿಗೇರ ವಾದ ಮಂಡಿಸಿದ್ದರು. ಪರಸ್ಪರ ಅರಿತು ಕೊಂಡು ಹೋಗುವಂತೆ ನ್ಯಾಯಾಧೀಶರು ಸಲಹೆ ನೀಡಿದರು. ಎಲ್ಲರಿಗೂ ಸಿಹಿ ಹಂಚಲಾಯಿತು.

ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ 649 ಪ್ರಕರಣಗಳ ಪೈಕಿ 36 ಇತ್ಯರ್ಥಗೊಳಿಸಿ ₹1.15 ಕೋಟಿ, ಸಿವಿಲ್ ನ್ಯಾಯಾಲಯದಲ್ಲಿ 528 ಪ್ರಕರಣಗಳ ಪೈಕಿ 181 ಇತ್ಯರ್ಥಪಡಿಸಿದ್ದು ₹34 ಲಕ್ಷ ಸಂದಾಯ ಮಾಡಿಕೊಳ್ಳಲಾಗಿದೆ.

ಹೆಚ್ಚುವರಿ ಸಿವಿಲ್ ನ್ಯಾಯಾಲದಲ್ಲಿ 528 ಪ್ರಕರಣಗಳ ಪೈಕಿ 266 ಇತ್ಯರ್ಥಗೊಂಡಿದ್ದು ₹22.34 ಲಕ್ಷ ವಸೂಲಿ ಮಾಡಲಾಗಿದೆ. ವ್ಯಾಜ್ಯ ಪೂರ್ವ, ವಿಮೆ, ಚೆಕ್ ಅಮಾನ್ಯ, ಅಪಘಾತ ಪರಿಹಾರ ಸೇರಿದಂತೆ ವಿವಿಧ ಕಟ್ಲೆಗಳಿಂದ ಒಟ್ಟು ₹1.71 ಕೋಟಿ ಹಣ ವಸೂಲಿ ಮಾಡಲಾಗಿದೆ.

ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಕಮತಗಿ, ಸಿವಿಲ್ ನ್ಯಾಯಾಧೀಶ ಕೆ.ಮಾರುತಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಸವರಾಜ ಲೋಕ ಅದಾಲತ್ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT