ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ಗುಡುಗುಸಹಿತ ಗಾಳಿ ಮಳೆ: ವಿದ್ಯುತ್‌ ವ್ಯತ್ಯಯ

ನಿರ್ಣಾ ಆಸುಪಾಸಿನಲ್ಲಿ 1 ಗಂಟೆಗೂ ಹೆಚ್ಚು ಕಾಲ ಮಳೆ
Published 15 ಮೇ 2024, 14:25 IST
Last Updated 15 ಮೇ 2024, 14:25 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ, ಮನ್ನಾಎಖ್ಖೇಳಿ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ಮಧ್ಯ ರಾತ್ರಿ ಗಾಳಿ, ಗುಡು‌ಗು ಮಿಂಚು ಸಹಿತ ಮಳೆಯಾಗಿದೆ.

ಪಟ್ಟಣ ಹಾಗೂ ಬೇಮಳಖೇಡಾ ಗ್ರಾಮಗಳಲ್ಲಿ ಅರ್ಧ ಗಂಟೆ ಗಾಳಿ ಮಳೆ ಸುರಿದರೆ, ನಿರ್ಣಾ ಗ್ರಾಮದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಗ್ರಾಮದ ಎಲ್ಲ ರಸ್ತೆಗಳ ಮೇಲೆ ಮಳೆ ಹಾಗೂ ಚರಂಡಿ ನೀರು ಹರುದಾಡಿ ಬೆಳಗ್ಗೆ ಸಂಚಾರ ಸಮಸ್ಯೆಯುಂಟಾಗಿತ್ತು. ಎಲ್ಲೆಂದರಲ್ಲಿ ಕೊಳಚೆ ನೀರು ಹರಿದಾಡಿದ್ದು ಕಂಡುಬಂತು.

ಗಾಳಿ, ಗುಡುಗು ಸಿಡಿಲಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಜನ ರಾತ್ರಿ ಪೂರ್ತಿ ಎಚ್ಚರವಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಹಲವರ ತಗಡಿ ಮನೆಗಳಲ್ಲಿ ಎಲ್ಲೆಂದರಲ್ಲಿ ನೀರ ಹನಿಗಳು ಸೋರುತ್ತಿರುವುದರಿಂದ ಹಾಸಿಗೆಗಳು ಒದ್ದೆಯಾಗಿದ್ದಕ್ಕೆ ಎಚ್ಚರವಾಗಿ ಕೂಡಬೇಕಾದ ಸ್ಥತಿ ಉಂಟಾಗಿತ್ತು. ಬೆಳಗ್ಗೆಯೂ ವಿದ್ಯುತ್‌ ಇಲ್ಲದಕ್ಕೆ ದಿನಬಳಕೆಯ ನೀರಿಗೂ ಸಮಸ್ಯೆ ಎದುರಿಸುವಂತಾಯಿತು. ಬೆಳೆ ಹಾನಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಆದರೆ, ಗಾಳಿ ಜೋರಾಗಿ ಬೀಸಿದ್ದರಿಂದ ಮಾವಿನ ಗಿಡಗಳ ಮಾವಿನ ಹಣ್ಣುಗಳು ಉದುರಿ ಬಿದ್ದ ಸಾಧ್ಯತೆ ಇದೆ.

ತಾಲ್ಲೂಕಿನ ವಿವಿಧೆಡೆ ಸುರಿದ ಮಳೆಯ ಪ್ರಮಾಣ: ಚಿಟಗುಪ್ಪ 0.5 ಸೆ.ಮೀ, ನಿರ್ಣಾ 4.5 ಸೆ,ಮೀ, ಬೇಮಳಖೇಡಾ 0.620 ಸೆ.ಮೀ, ಮನ್ನಾಎಖ್ಖೇಳಿ 2.52 ಸೆ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT