ಬುಧವಾರ, ಜೂನ್ 16, 2021
28 °C

ಅವಿರೋಧ ಆಯ್ಕೆ: ರಾಜಾರಾಮ ಚಿಟ್ಟಾಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್ ನಗರಸಭೆಯ ವಾರ್ಡ್ ಸಂಖ್ಯೆ 28 ರಿಂದ ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ರಾಜಾರಾಮ ಚಿಟ್ಟಾ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸನ್ಮಾನಿಸಿದರು.

‘ಮತದಾರರ ಆಶೀರ್ವಾದದಿಂದ ನಗರಸಭೆಗೆ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದೇನೆ. ಮೊದಲ ಬಾರಿ ವಾರ್ಡ್ ಸಂಖ್ಯೆ 26, ಎರಡನೇ ಮತ್ತು ಮೂರನೇ ಬಾರಿ ವಾರ್ಡ್ ಸಂಖ್ಯೆ 29 ಹಾಗೂ ಇದೀಗ ನಾಲ್ಕನೇ ಬಾರಿಗೆ ವಾರ್ಡ್ ಸಂಖ್ಯೆ 28 ರಿಂದ ಆಯ್ಕೆಯಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಮತದಾರರಿಗೆ ಕೃತಜ್ಞನಾಗಿದ್ದೇನೆ’ ಎಂದು ರಾಜಾರಾಮ ಚಿಟ್ಟಾ ತಿಳಿಸಿದರು.

‘ಮತದಾರರ ಅಪೇಕ್ಷೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವೆ. ವಾರ್ಡ್ ಸಂಖ್ಯೆ 28ಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಹಾಗೂ ಜನರ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನಿಸುವೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.