ಗುರುವಾರ , ಅಕ್ಟೋಬರ್ 22, 2020
24 °C

ಜಿಲ್ಲೆಯ ಜನರಿಗಾಗಿ ರೈಲು ಓಡಿಸಿದ್ದ ಅಂಗಡಿ: ಸಂಸದ ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದ ಸುದ್ದಿ ತಿಳಿದು ಶಾಕ್‌ ಆಗಿದೆ. ವಾರದ ಹಿಂದೆಯಷ್ಟೇ ಬೀದರ್ ಯಶವಂತಪುರ ರೈಲು ಪುನರ್ ಪ್ರಾರಂಭದ ಕುರಿತು ಮಾತನಾಡಿದ್ದೆ. ಅವರು ರೈಲ್ವೆ ಸಚಿವರಾದ ಮೇಲೆ ರಾಜ್ಯಕ್ಕೆ ಬಹಳಷ್ಟು ಅನುಕೂಲವಾಗಿತ್ತು ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ವಿಜಯದಶಮಿ, ದೀಪಾವಳಿ, ಗಣೇಶ್ ಚತುರ್ಥಿ ಸಂದರ್ಭದಲ್ಲಿ ವಿಶೇಷ ರೈಲು ಓಡಿಸಿ ಜಿಲ್ಲೆಯ ಜನರಿಗೆ ನೆರವಾಗಿದ್ದರು. ಬೀದರ್‌ ಜಿಲ್ಲೆಯ ಮಾರ್ಗವಾಗಿ ಹೋಗುವ ರೈಲ್ವೆ ಯೋಜನೆಗಳಿಗೂ ಅನುಕೂಲ ಮಾಡಿಕೊಟ್ಟಿದ್ದರು ಎಂದು ಅಂಗಡಿ ಅವರ ಸೇವೆಯನ್ನು ಸ್ಮರಿಸಿದ್ದಾರೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದಿಂದ ಕರ್ನಾಟಕದ ಅಭಿವೃದ್ಧಿಗೆ ತುಂಬಲಾರದ ನಷ್ಟವಾಗಿದೆ.
ಅತ್ಯಂತ ಸಜ್ಜನ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಉತ್ತರಕರ್ನಾಟಕದ ಕಟ್ಟಾಳುವಿನ ಅಕಾಲಿಕ ಅಗಲಿಕೆ ಅತೀವ ನೋವು ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು