ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣದ ಲಖನ್ ಸಿಂಗ್‌ಗೆ ಯುಪಿಎಸ್‌ಸಿಯಲ್ಲಿ 756ನೇ ರ್‍ಯಾಂಕ್‌

Published 16 ಏಪ್ರಿಲ್ 2024, 16:23 IST
Last Updated 16 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಲಖನ್ ಸಿಂಗ್‌ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2023 ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 756ನೇ ರ್‍ಯಾಂಕ್‌ ಪಡೆದಿದ್ದಾರೆ.

ಯುಪಿಎಸ್‌ಸಿ ರ‍್ಯಾಂಕ್ ವಿಜೇತರ ವಿವರ

ರ‍್ಯಾಂಕ್ ಸಂಖ್ಯೆ-756

ಹೆಸರು: ಲಖನ್ ಸಿಂಗ್ ದಿಲದಾರಸಿಂಗ್ ರಾಠೋರ್

ವಿದ್ಯಾರ್ಹತೆ: ಬಿ.ಇ (ಸಿವಿಲ್)

ಹಾಲಿ ಹುದ್ದೆ: ಇಲ್ಲ

ಊರು: ಶಿವಾಜಿನಗರ ಓಣಿ, ಬಸವಕಲ್ಯಾಣ

ಕೌಟುಂಬಿಕ ಹಿನ್ನೆಲೆ: ಲಖನ್ ಸಿಂಗ್ ಅವರ ತಂದೆ ದಿಲದಾರಸಿಂಗ್ ಬಸವಕಲ್ಯಾಣ ನಗರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ನಿವೃತ್ತರಾಗಿದ್ದರು. 18 ತಿಂಗಳ ಹಿಂದೆ ನಿಧನರಾಗಿದ್ದಾರೆ. ತಾಯಿ ಸೀಮಾ ಗೃಹಿಣಿಯಾಗಿದ್ದಾರೆ.

ಅಭ್ಯರ್ಥಿಯ ಅಭಿಪ್ರಾಯ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಕೆಲಸಕ್ಕೆ ಸೇರಿಕೊಳ್ಳದೆ ತಂದೆ–ತಾಯಿಯ ಬಯಕೆಯಂತೆ ಯುಪಿಎಸ್‌ಸಿ ಪರೀಕ್ಷೆಗಾಗಿ ಸಿದ್ಧತೆ ಕೈಗೊಂಡು ದೆಹಲಿಯ ವಾಜಿರಾಮ್ ಆ್ಯಂಡ್ ರವಿ ಸೆಂಟರ್‌ನಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದೇನೆ. ನಂತರ ಐದು ವರ್ಷ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಿ ಎನ್.ಸಿ.ಇ.ಆರ್.ಟಿ ಪುಸ್ತಕಗಳನ್ನು ಓದಿದೆ. ದಿನದ 12 ಗಂಟೆ ಸತತವಾಗಿ ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದಕ್ಕೆ ಕೆಲ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕುವ ಸಾಧ್ಯತೆಯಿದೆ. ಪ್ರಾಮಾಣಿಕವಾಗಿ ಸೇವೆಗೈದು ಸಮಾಜದಲ್ಲಿ ಎಲ್ಲ ರೀತಿಯಿಂದ ಪರಿವರ್ತನೆ ತರುವ ಬಯಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT