ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ವಚನ ಗ್ರಂಥ ಮೆರವಣಿಗೆ, ಪಟ್ಟಾಭಿಷೇಕ

ವಚನ ವಿಜಯೋತ್ಸವ ಸಮಾರೋಪ
Last Updated 27 ಫೆಬ್ರುವರಿ 2021, 17:12 IST
ಅಕ್ಷರ ಗಾತ್ರ

ಬೀದರ್: ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಮೂರು ದಿನಗಳ ವರೆಗೆ ನಡೆದ ವಚನ ವಿಜಯೋತ್ಸವ ಶನಿವಾರ ಸಮಾರೋಪಗೊಂಡಿತು.

ಬೆಳಿಗ್ಗೆ 8.30ಕ್ಕೆ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಧ್ವಜಾರೋಹಣ ನೆರವೇರಿಸಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಬಸವಗಿರಿಯ ಭಕ್ತಿಭವನದ ಆವರಣದಿಂದ ಪರುಶ ಕಟ್ಟೆಯ ವರೆಗೆ ವಚನ ಗ್ರಂಥ ಮೆರವಣಿಗೆ
ನಡೆಯಿತು. ‌

ಶರಣ, ಶರಣೆಯರು ವಚನಗ್ರಂಥಗಳನ್ನು ತಲೆ ಮೇಲೆ ಇಟ್ಟುಕೊಂಡು ಜಯಘೋಷ ಮೊಳಗಿಸುತ್ತ, ‘ಓಂ ಗುರುಬಸವ’ ಎಂದು ಪಠಿಸುತ್ತ ಸರತಿ ಸಾಲಿನಲ್ಲಿ ಬಂದರು.

ಮೆರವಣಿಗೆಯಲ್ಲಿ ಇದ್ದವರು ವಚನ ವಿಜಯೋತ್ಸವ ಎಂದು ಬರೆದಿದ್ದ ಟೊಪ್ಪಿಗೆ ಧರಿಸಿ, ಕೊರಳಲ್ಲಿ ಕೇಸರಿ ಶಲ್ಯ ಧರಿಸಿ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮಹಿಳೆಯರು ಶ್ವೇತ ವರ್ಣದ ಸೀರೆಗಳನ್ನು ತೊಟ್ಟಿದ್ದರು.

ಮೆರವಣಿಗೆಯಲ್ಲಿ ಇದ್ದವರು ಪರುಶಕಟ್ಟೆಯ ಮೇಲೆ ವಚನ ಗ್ರಂಥಗಳನ್ನು ಇಟ್ಟು ಭಕ್ತಿಯಿಂದ ನಮಿಸಿದರು. ವಚನಗಳನ್ನು ಪಠಿಸಿದರು. ಕೊನೆಯಲ್ಲಿ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ನೆರವೇರಿಸಲಾಯಿತು.

ಬಸವ ಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಶಿವರಾಜ ಮಲಕಟ್ಟೆ, ರಾಚಪ್ಪ ಪಾಟೀಲ, ರಾಜಕುಮಾರ ಪಾಟೀಲ, ಶರಣಪ್ಪ ಚಿಮಕೋಡೆ, ಚನ್ನಪ್ಪ ಕೋಟೆ, ಬಸವರಾಜ ಬಿರಾದಾರ, ವಿಶ್ವನಾಥ ಕಾಜಿ, ಉಷಾ ಮಿರ್ಚೆ, ಜಗದೇವಿ ಮದಕಟ್ಟೆ, ಸುವರ್ಣಾ, ಮಹಾದೇವಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT