ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನಗಳೇ ಶ್ರೇಷ್ಠ ಮಂತ್ರ’

Last Updated 9 ಫೆಬ್ರುವರಿ 2020, 10:57 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಬಸವ ಗಿರಿಯಲ್ಲಿ ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವದಲ್ಲಿ ಗುರುವಚನ ಸಾಮೂಹಿಕ ಪಾರಾಯಣವು ಅಕ್ಕ ಅನ್ನಪೂರ್ಣ ಅವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ನಂತರ ಮಾತನಾಡಿ ಅವರು, ‘ಶರಣರು ವಿಶ್ವಕ್ಕೆ ನೀಡಿದ ಸವೆಯದ ಸಂಪತ್ತು ವಚನಗಳು. ವಚನಗಳು ಸುಖ,ಶಾಂತಿ, ನೆಮ್ಮದಿಯ ಬದುಕಿನ ಸೂತ್ರಗಳಾಗಿವೆ’ ಎಂದರು.

‘ವಚನಗಳಲ್ಲಿ ಶರಣರ ದರ್ಶನವಿದೆ. ಮನೆ ಮನೆಗಳಲ್ಲಿ ವಚನ ಸಾಹಿತ್ಯದ ಸೌರಭ ಹರಡಲಿ. ವಚನಗಳನ್ನು ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ವಚನ ಪಾರಾಯಣ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

‘ಬಸವಾದಿ ಶರಣರ ಆಧ್ಯಾತ್ಮ ವಚನಗಳು ಉತ್ತಮ ಸಂಸ್ಕೃತಿಯ ಪ್ರತೀಕವಾಗಿವೆ. ಶ್ರದ್ಧೆ, ಭಕ್ತಿ, ಜ್ಞಾನ, ವಿನಯ, ಧೈರ್ಯ, ಸಮತೆ, ಸ್ವಾತಂತ್ರ್ಯತೆ, ಸಹಜತೆಗಳನ್ನು ಹೊಂದಿದ್ದು, ಪರಿಪೂರ್ಣ ಜೀವನ ಕಟ್ಟಿಕೊಡುವುದು’ ಎಂದು ವಿವರಿಸಿದರು.

ಆಕಾಶವಾಣಿಯ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಮಾತನಾಡಿ,‘ ಶರಣರು ಕಷ್ಟಪಟ್ಟು
ಉಳಿಸಿದ ವಚನ ಸಾಹಿತ್ಯದ ಸಂದರ್ಭ ನೆನೆಯುವುದೇ ವಚನ ವಿಜಯೋತ್ಸವ. ಶರಣರು ಕೋಟ್ಯಾಂತರ ವಚನಗಳು ಬರೆದಿದ್ದಾರೆ. ಆದರೆ ನಮಗೆ ದೊರೆತಿದ್ದು ಕೇವಲ 16 ಸಾವಿರ ವಚನಗಳು ಮಾತ್ರ’ ಎಂದದರು.

ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸಿದರು. ಅಕ್ಕನಾಗಲಾಂಬಿಕೆ, ಮಾತೆ ಶಾಂತಾದೇವಿ ನೇತೃತ್ವ ವಹಿಸಿದ್ದರು. ಶಿವಶಂಕರ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಗದೀಶ ಖೂಬಾ, ಅಶೋಕ ಖಂಡ್ರೆ, ವೀರಣ್ಣ ಮರ್ತೂರ, ಮಹೇಶ ಘಾಳೆ, ಶ್ರೀಧರ್, ಜಗನ್ನಾಥ ಮೂಲಗೆ ಬಸವನಗೌಡ ಪಾಟೀಲ, ಸಂತೋಷ ಮಲಶೆಟ್ಟಿ, ಸಂಜಯ ಇಂಡೆ, ನೀಲಾಂಬಿಕಾ ಕಳಕಪ್ಪ, ಸುಮಂಗಲಾ ಪ್ರಭು ಇದ್ದರು.

ಲಿಂಗಾಕ್ಷಿ ಖೇಣಿ, ಬಸವ ಪ್ರಿಯ, ಬಸವ ಗೌರಿ ವಚನ ನೃತ್ಯ ಪ್ರದರ್ಶಿಸಿದರು. ಶಾಂತಾ ಖಂಡ್ರೆ ಸ್ವಾಗತಿಸಿದರು. ಜ್ಞಾನದೇವಿ ಬಬಚಡೆ ನಿರೂಪಿಸಿದರು. ಮಹಾನಂದಾ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT