ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಬಹುಬೇಡಿಕೆಯ ತರಕಾರಿ ಬೆಲೆಯಲ್ಲಿ ಹೆಚ್ಚಳ

Last Updated 4 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಡುಗೆ ರುಚಿ ಹೆಚ್ಚಿಸುವ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಹಾಗೂ ಕರಿಬೇವು ಈ ವಾರ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿವೆ. ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದರೆ, ಮೆಣಸಿನಕಾಯಿ ಖಾರ ಹೆಚ್ಚಿಸಿಕೊಂಡಿದೆ. ಬೆಲೆ ಹೆಚ್ಚಳ ತೊಂಡೆಗೆ ತೊಡಕಾಗಿಲ್ಲ, ಬೆಂಡೆಕಾಯಿ ಬೆಂಡಾಗಿಲ್ಲ.

ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ, ತೊಂಡೆಕಾಯಿ ₹ 1,500, ಆಲೂಗಡ್ಡೆ, ಬೆಂಡೆಕಾಯಿ ₹ 500 ಹೆಚ್ಚಾಗಿದೆ,

ಹಿರೇಕಾಯಿ ಕುಗ್ಗಿದೆ, ನುಗ್ಗೆಕಾಯಿ ಮೆತ್ತಗಾಗಿದೆ. ಹೂಕೋಸು, ಎಲೆಕೋಸು, ಸಬ್ಬಸಗಿ, ಕೊತಂಬರಿ ಹಾಗೂ ಪಾಲಕ್‌ ಸ್ವಲ್ಪ ಮಟ್ಟಿಗೆ ಮುದುಡಿಕೊಂಡಿವೆ. ಹೂಕೋಸು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ, ಹಿರೇಕಾಯಿ, ನುಗ್ಗೆಕಾಯಿ, ಎಲೆಕೋಸು, ಸಬ್ಬಸಗಿ, ಕೊತಂಬರಿ, ಪಾಲಕ್‌ ₹ 1 ಸಾವಿರ, ಗಜ್ಜರಿ, ಮೆಂತೆ ಸೊಪ್ಪು ₹ 1,500, ಬೀಟ್‌ರೂಟ್‌ ₹ 500 ಇಳಿದಿದೆ.

ತರಕಾರಿ ರಾಜ ಬದನೆಕಾಯಿ ಕಿರೀಟ ಧರಿಸಿಕೊಂಡು ಸುಮ್ಮನೆ ಕುಳಿತುಕೊಂಡಿದೆ. ಬದನೆಕಾಯಿ, ಟೊಮೆಟೊ, ಡೊಣ ಮೆಣಸಿನಕಾಯಿ, ಬೀನ್ಸ್‌, ಚವಳೆಕಾಯಿ ಹಾಗೂ ನವಲಕೋಲ ಬೆಲೆ ಸ್ಥಿರವಾಗಿದೆ.

‘ಮಾರುಕಟ್ಟೆಯಲ್ಲಿ ಈ ವಾರ ಸೊಪ್ಪಿನ ಬೆಲೆ ಕಡಿಮೆಯಾದರೂ ಗಣೇಶನ ಹಬ್ಬಕ್ಕೆ ಏರಿಕೆಯಾಗಲಿದೆ. ದೇವರ ನೈವೇದ್ಯಕ್ಕೆ ಸೊಪ್ಪು ಬೇಕೇ ಬೇಕು. ಪುಂಡಿಪಲ್ಲೆ, ಸಬ್ಬಸಗಿ ಹಾಗೂ ಕೆಂಪುರಾಜಗಿರಿ ಬೆಲೆ ದುಪ್ಪಟ್ಟಾದರೂ ಆಶ್ಚರ್ಯ ಇಲ್ಲ’ ಎಂದು ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

ಬೀದರ್ ಸಗಟು ತರಕಾರಿ ಮಾರುಕಟ್ಟೆಗೆ ತೆಲಂಗಾಣದ ಜಿಲ್ಲೆಗಳಿಂದಲೇ ಹೆಚ್ಚು ತರಕಾರಿ ಬಂದಿದೆ. ಡೊಣ ಮೆಣಸಿನಕಾಯಿ, ಬೀನ್ಸ್, ಬೀಟ್‌ರೂಟ್‌, ಆಲೂಗಡ್ಡೆ, ಚವಳೆಕಾಯಿ ಹಾಗೂ ತೊಂಡೆಕಾಯಿ ಹೈದರಾಬಾದ್‌ ಮಾರುಕಟ್ಟೆಯಿಂದ ಆವಕವಾಗಿದೆ.

ಮಹಾರಾಷ್ಟ್ರದ ನಾಗಪುರ ಹಾಗೂ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಆವಕವಾಗಿದೆ. ಬೀದರ್, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಬದನೆಕಾಯಿ, ಎಲೆಕೋಸು, ಹೂಕೋಸು, ಸಬ್ಬಸಗಿ ಬಂದಿದೆ.

.....................................................................
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 35-40, 25-30
ಮೆಣಸಿನಕಾಯಿ 40-50, 30-40
ಆಲೂಗಡ್ಡೆ 35-40, 40-45
ಎಲೆಕೋಸು 50-60, 40-50
ಬೆಳ್ಳುಳ್ಳಿ 100-110, 100-120
ಗಜ್ಜರಿ 50-60, 40-45
ಬೀನ್ಸ್‌ 100-110, 100-110
ಬದನೆಕಾಯಿ 40-45, 40-45
ಮೆಂತೆ ಸೊಪ್ಪು 60-70, 50-55
ಹೂಕೋಸು 20-30, 40-50
ಸಬ್ಬಸಗಿ 40-45, 30-35
ಬೀಟ್‌ರೂಟ್‌ 50-55, 40-50
ತೊಂಡೆಕಾಯಿ 25-30, 40-45
ಕರಿಬೇವು 20-30. 30-40
ಕೊತಂಬರಿ 30-40, 20-30
ಟೊಮೆಟೊ 35-40, 30-40
ಪಾಲಕ್‌ 50-60. 40-50
ಬೆಂಡೆಕಾಯಿ 40-45, 40-50
ಹಿರೇಕಾಯಿ 40-50, 35-40
ನುಗ್ಗೆಕಾಯಿ 80-90, 70-80

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT