ಸೋಮವಾರ, ಆಗಸ್ಟ್ 15, 2022
27 °C
ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಅಣಿ: ಡಾ. ಶೈಲೇಂದ್ರ ಬೆಲ್ದಾಳೆ

ಜನವಾಡ: ವಿವಿಧೆಡೆ ‘ವಿಕಾಸ ತೀರ್ಥ’ ಬೈಕ್ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ‘ಕೇಂದ್ರ ಸರ್ಕಾರದ ಎಂಟು ವರ್ಷಗಳ ಸಾಧನೆ ಪ್ರಚಾರಾರ್ಥವಾಗಿ ಬಿಜೆಪಿ ಯುವ ಮೋರ್ಚಾ ಬೀದರ್ ದಕ್ಷಿಣ ಘಟಕದ ವತಿಯಿಂದ ಬೀದರ್ ತಾಲ್ಲೂಕಿನ ಚಿಟ್ಟಾದಿಂದ ಬಾಪೂರಿನ ಬೀದರ್ ದಕ್ಷಿಣ ಬಿಜೆಪಿ ಕಚೇರಿವರೆಗೆ ಬೈಕ್ ರ‍್ಯಾಲಿ ನಡೆಯಿತು.

ಚಿಟ್ಟಾದಿಂದ ಆರಂಭವಾದ ರ‍್ಯಾಲಿ ಘೋಡಂಪಳ್ಳಿ, ನಾಗೂರಾ, ಮನ್ನಳ್ಳಿ, ಹೊಕ್ರಾಣ (ಕೆ), ರಾಜಗೀರಾ, ಸಿಂದೋಲ್, ಭಂಗೂರ ಹಾಗೂ ಮನ್ನಾಎಖ್ಖೆಳ್ಳಿ ಮಾರ್ಗವಾಗಿ ಬಾಪೂರ ಕ್ರಾಸ್ ಬಳಿಯ ಬಿಜೆಪಿ ಕಚೇರಿಗೆ ತಲುಪಿ ಸಮಾರೋಪಗೊಂಡಿತು.

ಇದಕ್ಕೂ ಮುನ್ನ ರ‍್ಯಾಲಿಗೆ ಚಾಲನೆ ನೀಡಿದ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ,‘ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಟು ವರ್ಷಗಳ ಅವಧಿಯಲ್ಲಿ ಜನಪರ ಆಡಳಿತ ನೀಡಿದೆ. ಹಲವು ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಸರ್ವ ರೀತಿಯಿಂದಲೂ ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಹಾಬಾದ್, ಮಂಡಲ ಉಸ್ತುವಾರಿ ಪೀರಪ್ಪ ಯರನಳ್ಳಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಯ್ಯ ಸ್ವಾಮಿ, ಚೆನ್ನಪ್ಪ ಗೌರಶೆಟ್ಟಿ, ಧನರಾಜ್ ಯಾದವ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಜನಾರ್ದನ ರೆಡ್ಡಿ, ಮಂಡಲದ ಅಧ್ಯಕ್ಷ ಸಾಯಿನಾಥ ಪಾಟೀಲ ಶಮಶೀರನಗರ, ಶಿವಕುಮಾರ ಸುಲ್ತಾನಪುರ, ಅಮರ ಸಿ., ಘಾಳೆಪ್ಪ ಚಟ್ನಳ್ಳಿ, ಓಂಕಾರ ಮಜಗೆ ಹಾಗೂ ಅನಿಲ್ ಗುನ್ನಳ್ಳಿ ಪಾಲ್ಗೊಂಡಿದ್ದರು.

ಆಜಾದಿ ಕಾ ಅಮೃತ ಮಹೋತ್ಸವ

ಔರಾದ್: ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಪ್ರಧಾನಿ ಮೋದಿ ಅವರು ಎಂಟು ವರ್ಷಗಳ ಆಡಳಿತ ನಡೆಸಿದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ಬಿಜೆಪಿ ವಿಭಾಗೀಯ ಪ್ರಭಾರಿ ಈಶ್ವರಸಿಂಗ್ ಠಾಕೂರ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ,‘ಪ್ರಧಾನಿ ಮೋದಿ ಅವರ ಆಡಳಿತದ ಕುರಿತು ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ. ಕೋವಿಡ್‍ನಂಥ ಸಂಕಷ್ಟದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಮೋದಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬೀದರ್ ಪಶು ವಿವಿ ಆಡಳಿತ ಮಂಡಳಿ ಸದಸ್ಯ ವಸಂತ ಬಿರಾದಾರ, ಖಂಡೋಬಾ ಪಾಟೀಲ, ಹಣಮಂತ ಸುರನಾರ, ಶಿವಕುಮಾರ ಸ್ವಾಮಿ, ಬಸವರಾಜ ಹಳ್ಳೆ, ಶ್ರೀನಿವಾಸ ಖೂಬಾ, ಕೇರವಾ ಪವಾರ್, ಸಂತೋಷ ಪೋಕಲವಾರ, ಯಾದವರಾವ ಮೇತ್ರೆ, ಸಂದೀಪ ಪಾಟೀಲ, ಅಶೋಕ ಅಲ್ಮಾಜೆ, ಆನಂದ ದ್ಯಾಡೆ ಅನೇಕ ಕಾರ್ಯಕರ್ತರು ರ‍್ಯಾಲಿಯಲ್ಲಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು