ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜ. 2ರಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ

Published 1 ಜನವರಿ 2024, 16:18 IST
Last Updated 1 ಜನವರಿ 2024, 16:18 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಮಂಗಳವಾರ, ಬುಧವಾರ, ಗುರುವಾರ (ಜ.2,3,4) ಔರಾದ್‌, ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ 9ಕ್ಕೆ ಔರಾದ್‌ ತಾಲ್ಲೂಕಿನ ಸಂತಪುರ, ಮಧ್ಯಾಹ್ನ 2ಕ್ಕೆ ವಡಗಾಂವ, ಬುಧವಾರ ಬೆಳಿಗ್ಗೆ 9ಕ್ಕೆ ಚಿಂತಾಕಿ, ಸಂಜೆ 5ಕ್ಕೆ ಏಕಂಬಾ, ಜ. 4ರಂದು ಬೆಳಿಗ್ಗೆ 9ಕ್ಕೆ ಠಾಣಾಕುಶನೂರ, ಸಂಜೆ 5ಕ್ಕೆ ಕಮಲನಗರದಲ್ಲಿ ಯಾತ್ರೆ ಜರುಗಲಿದೆ.

ಕಾರ್ಯಕ್ರಮಗಳಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, ವಿವಿಧ ಯೋಜನೆಗಳಡಿ ಮಂಜೂರಾದ ಸಾಲ, ಸಹಾಯಧನಗಳ ಚೆಕ್‌, ಆಯುಷ್ಮಾನ್‌ ಭಾರತ, ಅಂಚೆ ಇಲಾಖೆಯ ಆರೋಗ್ಯ ಕಾರ್ಡ್‌, ಉಳಿತಾಯ ಖಾತೆಗಳ ಪಾಸ್ ಬುಕ್‌ಗಳನ್ನು ಖೂಬಾ ವಿತರಿಸುವರು ಎಂದು ಸೋಮವಾರ ಪ್ರಕಟಣೆ ತಿಳಿಸಿದೆ.

ಮಂಗಳವಾರ ಸಂಜೆ 4ಕ್ಕೆ ಬೀದರ್‌ನ ಮೈಲೂರ ಗಾಂಧಿನಗರದಲ್ಲಿ ಬಸವೇಶ್ವರರ ಮೂರ್ತಿ ಅನಾವರಣಗೊಳಿಸುವರು. ಸಂಜೆ 5ಕ್ಕೆ ರಾಂಪೂರೆ ಕಾಲೊನಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಉದ್ಯಾನದಲ್ಲಿ ನಿರ್ಮಿಸಿರುವ ಓಪನ್‌ ಜಿಮ್‌ ಉದ್ಘಾಟಿಸುವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT