ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ವರದಿ ಪರಿಣಾಮ| ಔರಾದ್: ಬೀಜ ವಿತರಣೆ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ

Published 12 ಜೂನ್ 2024, 16:26 IST
Last Updated 12 ಜೂನ್ 2024, 16:26 IST
ಅಕ್ಷರ ಗಾತ್ರ

ಔರಾದ್: ಇಲ್ಲಿಯ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ತಹಶೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿಯಲ್ಲಿ ಬುಧವಾರ ಪ್ರಕಟವಾದ ಬಿತ್ತನೆ ಬೀಜ ಪಡೆಯಲು ರೈತರ ಪರದಾಟ ಎಂಬ ವರದಿಯ ಹಿನ್ನೆಲೆಯಲ್ಲಿ ಭೇಟಿ ನೀಡಿದ ತಹಶೀಲ್ಧಾರ್‌ ಅವರು ಬಿತ್ತನೆ ಬೀಜ ವಿತರಣೆ ಸಂಬಂಧ ಕೃಷಿ ಅಧಿಕಾರಿಯಿಂದ ಮಾಹಿತಿ ಪಡೆದರು. ಬೀಜ ಹಾಗೂ ಗೊಬ್ಬರ ವಿತರಣೆ ವಿಷಯದಲ್ಲಿ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

‘ತಾಲ್ಲೂಕಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬೇಕಾದ 17, 816 ಕ್ವಿಂಟಲ್ ಸೋಯಾ ದಾಸ್ತಾನು ಬಂದಿದೆ. ಇದರಲ್ಲಿ ಈಗಾಗಲೇ 15,199 ಕ್ವಿಂಟಲ್ ಬೀಜ ರೈತರಿಗೆ ವಿತರಿಸಲಾಗಿದೆ. ಇನ್ನು 2,614 ಕ್ವಿಂಟಲ್ ಸೋಯಾ ಬೀಜದ ದಾಸ್ತಾನು ಇದೆ. ಅಗತ್ಯ ಬಿದ್ದರೆ ಹೆಚ್ಚುವರಿ ಬೀಜ ತರಿಸಲಾಗುವುದು. ಹೀಗಾಗಿ ರೈತರು ಬೀಜ ಪಡೆಯುವ ವಿಷಯದಲ್ಲಿ ಆತಂಕಪಡಬಾರದು’ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದರು.

‘ಗರಿಷ್ಠ ಎರಡು ಹೆಕ್ಟೇರ್ ಜಮೀನಿಗೆ ರಿಯಾಯ್ತಿ ದರದಲ್ಲಿ ಬೀಜ ವಿತರಿಸಲಾಗುತ್ತದೆ. ಒಮ್ಮೆ ಬೀಜ ಪಡೆದವರಿಗೆ ಮತ್ತೊಮ್ಮೆ ಕೊಡಲು ಆಗುವುದಿಲ್ಲ. ನಮ್ಮ ಬಳಿ ಇರುವ ಪ್ರತಿ ರೈತರ ಮಾಹಿತಿ ಅನುಗುಣವಾಗಿ ಬೀಜ ವಿತರಿಸಲಾಗುತ್ತದೆ. ಹೀಗಾಗಿ ಅರ್ಹ ಎಲ್ಲ ರೈತರಿಗೆ ಬೀಜ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಕೃಷಿ ಅಧಿಕಾರಿ ಚಂದ್ರಕಾಂತ ಉಡಬಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT