ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್, ಕಲಬುರ್ಗಿ: 690 ವಿವಿ ಪ್ಯಾಟ್‌ಗಳಲ್ಲಿ ದೋಷ

ಬೀದರ್, ಕಲಬುರ್ಗಿ; ಅಧಿಕ ತಾಪಮಾನ
Last Updated 23 ಏಪ್ರಿಲ್ 2019, 19:15 IST
ಅಕ್ಷರ ಗಾತ್ರ

ಕಲಬುರ್ಗಿ/ಬೀದರ್: ಕಲಬುರ್ಗಿ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಹಾಗೂ ಬೀದರ್ ಜಿಲ್ಲೆಯ 190 ಮತಗಟ್ಟೆಗಳ ವಿ.ವಿ ಪ್ಯಾಟ್‌ಗಳಲ್ಲಿ ಅಧಿಕ ತಾಪಮಾನದಿಂದಾಗಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಅವುಗಳನ್ನು ಬದಲಾಯಿಸಲಾಯಿತು.

ಅತಿಯಾದ ಬಿಸಿಲಿನಿಂದಾಗಿ ಭಾಲ್ಕಿ ತಾಲ್ಲೂಕಿನ 15 ಮತಗಟ್ಟೆಗಳ ವಿ.ವಿ ಪ್ಯಾಟ್‌ಗಳಲ್ಲಿ ಸುಮಾರು ಅರ್ಧಗಂಟೆ ತಾಂತ್ರಿಕ ದೋಷ ಕಂಡು ಬಂದಿತು.

ಮತದಾರರು ಮತ ಚಲಾಯಿಸಿದರೂ ವಿ.ವಿ ಪ್ಯಾಟ್‌ ಚೀಟಿ ಹೊರಬರಲಿಲ್ಲ. ಕಮಲನಗರ, ಸೋನಾಳ, ಕಳಗಾಪುರ, ಮುರ್ಕಿವಾಡಿ, ತೊಣವಾಡಿಯಲ್ಲಿ ಕೆಲ ಕಾಲ ಮತಯಂತ್ರಗಳಲ್ಲಿ ಇಂತಹದ್ದೇ ಸಮಸ್ಯೆ ಕಾಣಿಸಿಕೊಂಡಿತು. ತಾಂತ್ರಿಕ ಸಿಬ್ಬಂದಿ ಸರಿಪಡಿಸಿದರು.

‘20 ಕಂಟ್ರೋಲ್ ಯುನಿಟ್, 20 ಬ್ಯಾಲೆಟ್ ಯುನಿಟ್ ಹಾಗೂ 190 ವಿ.ವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಜಿಲ್ಲೆ
ಯಲ್ಲಿ 976 ವಿ.ವಿ ಪ್ಯಾಟ್‌ಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲಾಗಿತ್ತು. ಹೀಗಾಗಿ ಬೇರೆ ವಿ.ವಿ ಪ್ಯಾಟ್‌ಗಳನ್ನು ಜೋಡಿಸಲಾಯಿತು’ ಎಂದು ಬೀದರ್‌ ಜಿಲ್ಲಾಧಿಕಾರಿಮಹಾದೇವ ತಿಳಿಸಿದರು.

ಕಮಲನಗರ ತಾಲ್ಲೂಕಿನ ಚಿಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಂಡಿಮುಖೇಡ ಗ್ರಾಮದಲ್ಲಿ ರಾತ್ರಿ 8.10ರ ವರೆಗೂ ಮತದಾನ ನಡೆಯಿತು.

ಸೆನ್ಸಾರ್‌ನಿಂದ ಕಾರ್ಯನಿರ್ವಹಣೆ: ಮತವನ್ನು ಖಾತರಿಪಡಿಸಿಕೊಳ್ಳಲು ವಿದ್ಯುನ್ಮಾನ ಮತಯಂತ್ರದ (ಇವಿಎಂ) ಜತೆ ಅಳವಡಿಸುವ ವಿ.ವಿ. ಪ್ಯಾಟ್‌ ಯಂತ್ರವು ಸೆನ್ಸಾರ್‌ ಮೂಲಕ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಈ ಯಂತ್ರವನ್ನು ತಂಪಾದ ಸ್ಥಳದಲ್ಲಿ ಇಡಬೇಕು. ವಿ.ವಿ ಪ್ಯಾಟ್ ಅತಿ ಸೂಕ್ಷ್ಮ ಯಂತ್ರವಾಗಿದ್ದು ಅದನ್ನು ಹೆಚ್ಚು ಶಾಖ ಅಥವಾ ಬೆಳಕು ಇರುವ ಜಾಗದಲ್ಲಿ ಇಡುವಂತಿಲ್ಲ. ಕಲಬುರ್ಗಿಯಲ್ಲಿ ಮಂಗಳವಾರ 42 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು. 40 ಡಿಗ್ರಿ ಸೆಲ್ಷಿಯಸ್‌ಗಿಂತಲೂ ಕಡಿಮೆ ಉಷ್ಣಾಂಶವಿದ್ದರೆ ಮಾತ್ರ ವಿ.ವಿ ಪ್ಯಾಟ್‌ಗಳು ಕೆಲಸ ಮಾಡುವುದರಿಂದ ಬಹಳಷ್ಟು ಮತಗಟ್ಟೆಗಳಲ್ಲಿ ತೊಂದರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT