ಗುರುವಾರ , ಜುಲೈ 29, 2021
23 °C
ಬೆಳೆಗಳು ನೀರು ಪಾಲು: ರೈತರಿಗೆ ಮತ್ತೆ ಸಂಕಟ

ರಸ್ತೆಯಲ್ಲಿ ನೀರು; ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ತಾಲ್ಲೂಕು ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ, ತಡರಾತ್ರಿ ಧಾರಾಕಾರ ಮಳೆ ಸುರಿಯಿತು.

ಡೋಣಗಾಂವ್, ಸೋನಾಳ, ಕಳಗಾಪುರ, ಠಾಣಾಕುಶನೂರು, ಬೆಳಕುಣಿ, ದಾಬಕಾ, ಮುರ್ಕಿ, ಹೊಕರ್ಣಾ, ಭಂಡಾರಕುಮಟಾ, ಮುಧೋಳ, ಹೊಳಸಮುದ್ರ ಗ್ರಾಮಗಳಲ್ಲಿ ಮಳೆ ಸುರಿದಿದೆ.

ಎರಡು ದಿನಗಳಿಂದ ಅಲ್ಪ ಬಿಸಿಲು ಇದ್ದಿದ್ದರಿಂದ ಹೆಸರು, ಸೋಯಾ, ತೊಗರಿಗೆ ಕಳೆ ತೆಗೆಯಲು, ಎಡೆಕುಂಟೆ ಹೊಡೆಯಲು, ಔಷಧಿ ಸಿಂಪಡಣೆಗೆ ಮುಂದಾಗಿದ್ದ ರೈತರು ಸಂಜೆ ಸುರಿದ ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.

‘ಮುಂಗಾರು ಹಂಗಾಮಿನ ಇತರೆ ಬೆಳೆಗಳಿಗೆ ಹೊಲಿಸಿದಲ್ಲಿ ಹೆಸರು ಬೆಳೆ ಸೂಕ್ಷ್ಮ. ಅಧಿಕ ಮಳೆ ಸುರಿದರೆ ತಡೆದುಕೊಳ್ಳುವ ಶಕ್ತಿ ಈ ಬೆಳೆಗೆ ಇರುವುದಿಲ್ಲ’ ಎಂದು ರೈತರು ತಿಳಿಸಿದರು.

ಅಧಿಕ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೆಳಸೇತುವೆಗಳ ಮೇಲೆ ಮಳೆ ನೀರು ಹರಿದು ಗಂಟೆಗಳ ಕಾಲ ಉದಗೀರ-ಔರಾದ್, ಚಿಕ್ಲಿ-ಕಮಲನಗರ, ದಾಬಕಾ-ಖೇರ್ಡಾ, ಮುರ್ಕಿ ವಿವಿಧ ಗ್ರಾಮಕ್ಕೆ ತೆರಳುವ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು