ಅವಿಶ್ವಾಸ ಗೊತ್ತುವಳಿ ಮಂಡನೆ: ವಿಶೇಷ ಸಭೆ ಕರೆಯಲು 18 ಸದಸ್ಯರ ಒತ್ತಾಯ

7
ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ

ಅವಿಶ್ವಾಸ ಗೊತ್ತುವಳಿ ಮಂಡನೆ: ವಿಶೇಷ ಸಭೆ ಕರೆಯಲು 18 ಸದಸ್ಯರ ಒತ್ತಾಯ

Published:
Updated:
Prajavani

ಬೀದರ್: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಭೆ ಕರೆಯಬೇಕು ಎಂದು ಜಿಲ್ಲಾ ಪಂಚಾಯಿತಿಯ 18 ಜನ ಸದಸ್ಯರು ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗಾಗಿ ವಿಶೇಷ ಸಭೆ ಕರೆಯಲು ಜನವರಿ 17 ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಅವರು 15 ದಿನಗಳ ಕಾಲಮಿತಿಯೊಳಗೆ ಸಭೆ ಕರೆದಿಲ್ಲ ಎಂದು ದೂರಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕೈಪಿಡಿ 1993ರ ಅಧಿನಿಯಮ 180 (2)(ಎ)ರ ಪ್ರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ವಿಶೇಷ ಸಭೆ ಕರೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸದಸ್ಯರಾದ ಗೀತಾ ಪಂಡಿತರಾವ್ ಚಿದ್ರಿ, ಉಷಾ ಆರ್. ನಿಟ್ಟೂರಕರ್, ಬಾಬುಸಿಂಗ್ ಹಜಾರಿ, ರವೀಂದ್ರ ರೆಡ್ಡಿ, ಅನಿಲಕುಮಾರ ಬಿರಾದಾರ, ಸುರೇಖಾ ಭೋಸ್ಲೆ, ಮಾರುತಿ ಚವಾಣ್, ಲಕ್ಷ್ಮಣರಾವ್ ಬುಳ್ಳಾ, ವಿಜಯಕುಮಾರ ಪಾಟೀಲ, ಜಯಶ್ರೀ ರಾಠೋಡ್, ಮಂಜುಳಾ ಸ್ವಾಮಿ, ಮೀನಾ ಚವಾಣ್, ಫೆರೋಜ್‌ಖಾನ್‌, ಅಫ್ರೋಜ್ ಖಾನ್, ರಾಜಶೇಖರ ಮೇತ್ರೆ, ರೇಖಾಬಾಯಿ ಮದಕಟ್ಟಿ, ಶೀತಲ್ ಎಚ್. ಚವಾಣ್, ತಾರಾಬಾಯಿ ಲಕ್ಷ್ಮಣರಾವ್ ರಾಠೋಡ್ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !